ದೇವರಿಗೆ ಆಭರಣ, ನಗದು, ಕುರಿ, ಕೋಳಿ, ಹೀಗೆ ನಾನಾ ರೀತಿಯ ಹರಕೆ ನೀಡುವುದನ್ನು ನೋಡಿದ್ದೇವೆ, ಆದರೆ ಕಾಫಿನಾಡು ಕೊಡಗಿನಲ್ಲಿ ಜನರು ವಿಚಿತ್ರವಾಗಿ ತಮ್ಮ ಹರಿಕೆ ತೀರಿಸುತ್ತಾರೆ.
ಮಡಿಕೇರಿ(ಮೇ.26): ದೇವರಿಗೆ ಆಭರಣ, ನಗದು, ಕುರಿ, ಕೋಳಿ, ಹೀಗೆ ನಾನಾ ರೀತಿಯ ಹರಕೆ ನೀಡುವುದನ್ನು ನೋಡಿದ್ದೇವೆ, ಆದರೆ ಕಾಫಿನಾಡು ಕೊಡಗಿನಲ್ಲಿ ಜನರು ವಿಚಿತ್ರವಾಗಿ ತಮ್ಮ ಹರಿಕೆ ತೀರಿಸುತ್ತಾರೆ.
ತಮ್ಮ ನೆಚ್ಚಿನ ದೈವಕ್ಕೆ ಬೈಗುಳದ ಮೂಲಕ ಪೂಜಿಸುತ್ತಾರೆ. ವಿವಿಧ ರೀತಿಯ ಪೋಷಾಕು ತೊಟ್ಟ ಆದಿವಾಸಿಗರು ತಾವಿರುವ ಗ್ರಾಮದ ಸುತ್ತಮುತ್ತಲ, ಪಟ್ಟಣದ ಬೀದಿಗಳಲ್ಲಿ ಹಾಡಿ ಕುಣಿಯುತ್ತಾ ಹಣ ಬೇಡುತ್ತಾರೆ. ಮಹಿಳೆಯರ ಹಳೆಯ ಬಟ್ಟೆಗಳನ್ನೆ ವಿಭಿನ್ನವಾಗಿ ಡಿಸೈನ್ ಮಾಡಿಕೊಂಡು ಧರಿಸಿ ಬರುವ ಆದಿವಾಸಿ ಹುಡುಗರು ಹಬ್ಬವನ್ನು ವಿಚಿತ್ರವಾಗಿ ಆಚರಿಸುತ್ತಾರೆ.
ಇನ್ನು ಕೆಲವರು ದೇವರುಗಳಂತೆ ಅಲಂಕಾರಮಾಡಿಕೊಂಡು ನೃತ್ಯಮಾಡಿ ಸಂಭ್ರಮಿಸುತ್ತಾರೆ. ಎರಡು ದಿನಗಳು ನಡೆಯುವ ಹಬ್ಬದಲ್ಲಿ ನಾಗರ ಹೊಳೆಯಲ್ಲಿರುವ ಗಿರಿಜನರು ಸೇರಿದಂತೆ ಹಲವಡೆಯಿಂದ ಹಬ್ಬದಲ್ಲಿ ಭಾಗಿಯಾಗುತ್ತಾರೆ. ಎಲ್ಲಾ ನೋವನ್ನು ಮರೆತು ತಮ್ಮ ದೈವಕ್ಕೆ ಶರಣಾಗುತ್ತಾರೆ.
