ನೋಟು ಅಮಾನ್ಯದ ಬಳಿಕ ಜನರಲ್ಲಿ ನಿವೇಶನಗಳನ್ನು ಕೊಳ್ಳಲು ಹಿಂಜರಿಕೆಯಾಗುತ್ತತ್ತು. ಆದರೆ, ನಮ್ಮ ಮನೆ ಎಕ್ಸ್‌'ಪೋದಲ್ಲಿ ಈ ಬಗ್ಗೆ ವಿವರಣೆ ನೀಡಲಾಗುತ್ತಿದೆ. ಈಗ ನಿವೇಶನ ಕರೀದಿ ಮಾಡಿದರೆ ನಮ್ಮ ಹಣ ಮೋಸವಾಗುವುದಿಲ್ಲ ಎಂಬ ನಂಬಿಕೆ ಬಂದಿದೆ ಎಂದು ಎಂದು ಎಕ್ಸ್‌ಪೋಗೆ ಭೇಟಿ ನೀಡಿದ್ದ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು: ಸುವರ್ಣನ್ಯೂಸ್‌ ‘ನಮ್ಮ ಮನೆ' ಪ್ರಾಪರ್ಟಿ ಎಕ್ಸ್‌ಪೋಗೆ ಶನಿವಾರ ಮನೆ, ನಿವೇಶನ ಕೊಳ್ಳ ಬಯಸುವ ಜನಸಾಗರ ದಶದಿಕ್ಕುಗಳಿಂದ ಹರಿದು ಬಂದಿತ್ತು. ಕನಸಿನ ಮನೆ ಕಟ್ಟುವ ಹಾಗೂ ಕೊಳ್ಳುವ ಬಯಕೆಯ ಜತೆಗೆ ಹೂಡಿಕೆಗೆ ಅವಕಾಶಗಳನ್ನು ಬಾಚಿಕೊಳ್ಳಲು ಜನರು ಸ್ಟಾಲ್‌ಗಳಲ್ಲಿ ಮುಗಿಬಿದ್ದಿದ್ದರು. 

ಶನಿವಾರ ನಗರದ ಅರಮನೆ ಮೈದಾನದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಆವರಣದಲ್ಲಿ ನಡೆಯುತ್ತಿರುವ ಪಾಪರ್ಟಿ ಎಕ್ಸ್‌ಪೋದಲ್ಲಿ 50ಕ್ಕೂ ಹೆಚ್ಚು ಬಿಲ್ಡರ್‌ಗಳು, ಡೆವಲಪರ್‌ಗಳು ಪಾಲ್ಗೊಂ ಡಿದ್ದು, ನಿವೇಶನ ಮನೆಗಳನ್ನು ಕೊಳ್ಳುವವರಿಗೆ ಒಂದೇ ಸೂರಿನಡಿಯಲ್ಲಿ ಮಾಹಿತಿಗಳನ್ನು ಒದಗಿಸಿದರು. ಬೆಂಗಳೂರು ನಗರವೂ ಸೇರಿದಂತೆ ನಗರ ಹೊರವಲ ಯದಲ್ಲಿರುವ ಬೆಂಗಳೂರಿನಿಂದ ಕೆಲವೇ ನಿಮಿಷಗಳಲ್ಲಿ ತಲುಪಬಲ್ಲ ಭಾಗಗಳಲ್ಲಿ ನಿವೇಶನಗಳು ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿತ್ತು. ಗ್ರಾಹಕರ ಕೈಗೆಟಕುವ ದರದಲ್ಲಿ ಸಿಗುವ ಮತ್ತು ಎಲ್ಲಾ ಅಗತ್ಯ ಪರವಾನಿಗೆ(ಅಪ್ರೂವಲ್‌) ಹಾಗೂ ದಾಖಲೆಗಳನ್ನು ಹೊಂದಿರುವ ನಿವೇಶನಗಳಾಗಿದ್ದರಿಂದ ಎಕ್ಸ್‌ಪೋದ ಎಲ್ಲಾ ಮಳಿಗೆಗಳಲ್ಲಿ ಕಿಕ್ಕಿರಿದ ಜನ ಸಂದಣಿಯಿತ್ತು. 

ಫ್ಲ್ಯಾಟ್‌ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಹೋಲಿಕೆ ಮಾಡಿದಲ್ಲಿ ನಿವೇಶನಗಳ ಬೇಡಿಕೆ ಅಪಾರವಾಗಿತ್ತು. ಸುಲಭ ಕಂತುಗಳು, ಶೂನ್ಯ ಬಡ್ಡಿದರದ ಸಾಲ, ಜತೆಗೆ ಸಾಕಷ್ಟುಕೊಡುಗೆಗೆಳ ಮಹಾ ಪೂರದ ನಡುವೆ ಜನರ ಕೊಳ್ಳುವ ಬಯಕೆ ಗರಿಗೆದರಿಸುವಲ್ಲಿ ಎಕ್ಸ್‌ಪೋ ಯಶಸ್ವಿಯಾ ಯಿತು. ನಿವೇಶನಗಳು ಬೆಂಗಳೂರು ಹೊರ ಭಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲಭ್ಯವಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೈಸೂರು ರಸ್ತೆ, ನೆಲ ಮಂಗಲ, ಹೆಸರಘಟ್ಟ, ಬನ್ನೇರುಘಟ್ಟರಸ್ತೆ ಸೇರಿದಂತೆ ಮೊದಲಾದ ಭಾಗಗಳಲ್ಲಿನ ನಿವೇಶನಗಳಿಗೆ ಜನ ಆಸಕ್ತಿ ತೋರಿಸುತ್ತಿದ್ದದ್ದು ಕಂಡು ಬಂತು. ನಿವೇಶನ ಅಥವಾ ಫ್ಲ್ಯಾಟ್‌ ಕೊಳ್ಳ ಬಯಸುವವರು ಸೂಕ್ತ ಸ್ಥಳ ಆಯ್ಕೆ ಮಾಡಿ ಆ ಸ್ಥಳಗಳಿಗೆ ಎಕ್ಸ್‌ಪೋದಿಂದಲೇ ತೆರಳಿದರು. ಮತ್ತೆ ಕೆಲವರು ಭಾನುವಾರ ನಿವೇಶನ ಸ್ಥಳ ಪ್ರದೇಶಗಳಿಗೆ ಭೇಟಿ ನೀಡುವುದಕ್ಕೆ ಬುಕ್ಕಿಂಗ್‌ ಮಾಡಿದರು. ಬಿಲ್ಡರ್‌ ಮತ್ತು ಡೆವಲಪರ್‌ಗಳು ಗ್ರಾಹಕರನ್ನು ನಿವೇಶನ, ಫ್ಲ್ಯಾಟ್‌ ಇರುವ ಜಾಗಕ್ಕೆ ಉಚಿತವಾಗಿ ಡ್ರಾಪ್‌ ಮತ್ತು ಪಿಕಪ್‌ಗೆ ವ್ಯವಸ್ಥೆ ಮಾಡಿದ್ದರು. 

ಭಾನುವಾರ ಎಕ್ಸ್‌'ಪೋ ಕೊನೆದಿನ ವಾಗಿದ್ದು, ಭಾರಿ ಸಂಖ್ಯೆಯಲ್ಲಿ ಜನ ಹರಿದು ಬರುವ ನಿರೀಕ್ಷೆಯಿದೆ. ಇದಕ್ಕಾಗಿ ಎಕ್ಸ್‌ಪೋದಲ್ಲಿ ಭಾಗವಹಿಸಿರುವ ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳು ಸಾಕಷ್ಟುಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ. ಗ್ರಾಹಕರಿಗೆ ತಾವು ಅಭಿವೃದ್ಧಿ ಪಡಿಸುತ್ತಿರುವ ಬಡಾವಣೆ ನಿವೇಶನಗಳ ಮಾಹಿತಿಯುಳ್ಳ ಕರ ಪತ್ರವನ್ನು ನೀಡುತ್ತಿದ್ದು, ಗ್ರಾಹಕರು ತಮ್ಮ ಸೂಕ್ತ ಆಯ್ಕೆ ಮಾಡಲು ಸಾಕಷ್ಟುಅನುಕೂಲತೆ ಕಲ್ಪಿಸಿದೆ. 

ಎಕ್ಸ್‌'ಪೋಗೆ ಎರಡು ದಿನಗಳು ದೊರೆತಿರುವ ಸ್ಪಂದನೆಗೆ ಸಂತಸಗೊಂಡಿದ್ದು, ಭಾನುವಾರ ಇನ್ನಷ್ಟುಗ್ರಾಹಕರನ್ನು ಸೆಳೆಯುವ ನಿರೀಕ್ಷೆಯಿದೆ. ಪ್ರತಿದಿನ ನಡೆಯುವ ಲಕ್ಕಿಡ್ರಾಗಳು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡುತ್ತಿದೆ. ಬಂಪರ್‌'ಡ್ರಾ ಉಚಿತ ನಿವೇಶನ ಲಕ್ಕೀ ಡ್ರಾ ನಡೆಯಲಿದ್ದು, ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಎಕ್ಸ್‌'ಪೋ ತೆರೆದಿರಲಿದೆ. 

ನೋಟು ಅಮಾನ್ಯದ ಬಳಿಕ ಜನರಲ್ಲಿ ನಿವೇಶನಗಳನ್ನು ಕೊಳ್ಳಲು ಹಿಂಜರಿಕೆಯಾಗುತ್ತತ್ತು. ಆದರೆ, ನಮ್ಮ ಮನೆ ಎಕ್ಸ್‌'ಪೋದಲ್ಲಿ ಈ ಬಗ್ಗೆ ವಿವರಣೆ ನೀಡಲಾಗುತ್ತಿದೆ. ಈಗ ನಿವೇಶನ ಕರೀದಿ ಮಾಡಿದರೆ ನಮ್ಮ ಹಣ ಮೋಸವಾಗುವುದಿಲ್ಲ ಎಂಬ ನಂಬಿಕೆ ಬಂದಿದೆ ಎಂದು ಎಂದು ಎಕ್ಸ್‌ಪೋಗೆ ಭೇಟಿ ನೀಡಿದ್ದ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಂಪರ್‌ ಬಹುಮಾನ: ಎಕ್ಸ್‌ ಪೋಗೆ ಭೇಟಿ ನೀಡುವ ಎಲ್ಲಾ ಗ್ರಾಹಕರನ್ನು ನೋಂದಣಿ ಮಾಡಿಕೊಳ್ಳುತ್ತಿದ್ದು, ಅವರುಗಳಲ್ಲಿ ಹತ್ತು ಜನ ಅದೃಷ್ಠಶಾ ಲಿಗಳನ್ನು ಆಯ್ಕೆ ಮಾಡಿ ತಲಾ ರು. 10 ಸಾವಿರ ಬಹುಮಾನ ನೀಡಲಾಗುತ್ತಿದೆ. ಅಂತಿಮವಾಗಿ ಭಾನುವಾರ ನಡೆಯಲಿರುವ ಲಕ್ಕೀ ಡ್ರಾನಲ್ಲಿ ವಿಜೇತರಾದ ಒಬ್ಬರಿಗೆ 30/40 ಅಳತೆಯ ನಿವೇಶನವನ್ನು ಬಂಪರ್‌ ಬಹುಮಾನ ನೀಡುವುದಕ್ಕೆ ನಿರ್ಧರಿಸಲಾಗಿದ್ದು, ಚಿತ್ರ ನಟಿ ರಾಗಿಣಿ ತ್ರಿವೇದಿ ಅದೃಷ್ಟಶಾಲಿಯನ್ನು ಆಯ್ಕೆ ಮಾಡಲಿದ್ದಾರೆ. 

ಶನಿವಾರದ ಲಕ್ಕಿ ಡ್ರಾ ವಿಜೇತರಿವರು
ವಿ.ಜಿ.ಪಾಟೀಲ್‌.......7333
ರೇಣುಕಾರ್ಯ.......5556
ಅಮಿತ್‌ ಗಡೇಕರ್‌....4454
ಲೋಕೇಶ್‌ .ಕೆ.ಪಿ......2042
ಮಂಜುನಾಥ..........7356
ಅಲ್ಲಾಬಕಾಶ್‌ ಖಾನ್‌...7474
ಎ. ಮೆರ್ವಿನ್‌...........1318
ಅನಿಲ್‌ ಕುಮಾರ್‌.....3730
ಎಂ.ಆರ್‌.ಮಧು......8240
ಜಯಲಕ್ಷ್ಮೀ..........2847

ಶೋನಲ್ಲಿ ವ್ಯಕ್ತವಾದ ಅಭಿಪ್ರಾಯಗಳು

ಜನ ಅಲ್ಪ ಪ್ರಮಾಣದಲ್ಲಿ ಕಡಿಮೆ ಬರುತ್ತಿದ್ದಾರೆ. ಆದರೂ ಬರುವವರೆಲ್ಲ ನಿಜವಾಗದ ಗ್ರಾಹಕರಾಗಿದ್ದಾರೆ. ಕಾಟಾಚಾರಕ್ಕಾಗಿ ಭೇಟಿ ನೀಡುವವರ ಸಂಖ್ಯೆ ಅತ್ಯಂತ ಕಡಿಮೆಯಿದೆ. ಭೇಟಿ ನೀಡಿದ ಹಲವರಲ್ಲಿ ಸ್ಥಳ ಪರೀಶೀಲನೆಗೆ ಬರುವುದಕ್ಕೆ ದಿನಾಂಕವನ್ನು ನಿಗದಿ ಮಾಡಿಕೊಂಡಿದ್ದಾರೆ.
- ವಿ. ಉಮಾನಾಥ್‌, ಆಸ್ತಾ ಪ್ರಾಪರ್ಟಿಸ್‌ನ ವ್ಯವಹಾರ ಅಭಿವೃದ್ಧಿ ಅಧಿಕಾರಿ

ನಿವೇಶನ ಖರೀದಿಗೆ ಸಂಬಂಧಿಸಿದಂತೆ ಉತ್ತಮವಾದ ಮಾಹಿತಿಯನ್ನು ಸುವರ್ಣ ನ್ಯೂಸ್‌ ನಮ್ಮ ಮನೆ ಎಕ್ಸ್‌ಪೋದಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿವಿಧ ರೀತಿಯ ಆಯ್ಕೆಗಳಿಗೆ ಅವಕಾಶವಿದೆ. ಸೂಕ್ತ ವಾದ ಜಾಗದಲ್ಲಿ ಮನೆ ಮಾಡಿಕೊಳ್ಳುವುದು ಸುಲಭವಾಗಿದೆ.
- ಡಾ. ಚನ್ನಕೇಶವ, ಎಕ್ಸ್‌ಪೋಗೆ ಭೇಟಿ ನೀಡಿದ್ದ ಬೆಂಗಳೂರು ನಿವಾಸಿ

ಪತ್ರಿಕೆಯಲ್ಲಿನ ವರದಿ ನೋಡಿ ಸುವರ್ಣ ನ್ಯೂಸ್‌ ಎಕ್ಸ್‌ಪೋಗೆ ಭೇಟಿ ನೀಡಿದ್ದೇನೆ. ಎಕ್ಸ್‌ಪೋದಲ್ಲಿ ಅತ್ಯಾಕಷÜರ್‍ಕ ರಿಯಾಯಿತಿಗಳು ಲಭ್ಯವಿದ್ದು, ನಗರದ ಹೊರವಲಯದಲ್ಲಿ ನಿವೇಶನ ಖರೀದಿ ಮಾಡಲು ಚಿಂತನೆ ನಡೆಸಿದ್ದೇನೆ.
- ನಿಮ್ಮು, ಕೇರಳ ಮೂಲದ ಆರ್‌.ಟಿ.ನಗರ ನಿವಾಸಿ

ಭವಿಷ್ಯದಲ್ಲಿ ನಿವೇಶನ ಖರೀದಿಸುವ ಚಿಂತನೆಯಿದೆ. ವಿಚಾರಿಸುವು ದಕ್ಕಾಗಿ ಸುವರ್ಣ ನ್ಯೂಸ್‌ ಎಕ್ಸ್‌ ಪೋಗೆ ಭೇಟಿ ನೀಡಿ ಫ್ಲ್ಯಾಟ್‌ಗಳಿ ಬಗ್ಗೆ ಸಂಪೂರ್ಣ ವಿವರಣೆ ಪಡೆದಿದ್ದು, ಶೀಘ್ರದಲ್ಲಿ ಪ್ಲ್ಯಾಟ್‌ ಖರೀದಿ ಮಾಡಲಾಗುವುದು.
- ಪ್ರತಿಭಾ, ಬೆಂಗಳೂರು ನಿವಾಸಿ

epaper.kannadaprabha.in