Asianet Suvarna News Asianet Suvarna News

40 ವರ್ಷ ಮೇಲ್ಪಟ್ಟವರಿಗೆ ವಾರದಲ್ಲಿ 3 ದಿನ ಮಾತ್ರ ಕೆಲಸ!

ಕೆಲಸಕ್ಕೂ ಮತ್ತು ಒತ್ತಡಕ್ಕೂ ಮೊದಲಿನಿಂದಲೂ ಸಂಬಂಧ ಬೆಸೆದುಕೊಂಡೆ ಬಂದಿದೆ. ಹಾಗಾದರೆ ನಿಜಕ್ಕೂ ಮಾನವನ ಪ್ರೊಡೆಕ್ಟಿವಿಟಿ ಎಷ್ಟಿರಬೇಕು? ಹೆಚ್ಚಿಗೆ ಕೆಲಸ ಮಾಡುವುದರಿಂದ ಇದು ಹೆಚ್ಚಾಗುತ್ತದೆಯೇ? ಅಥವಾ ಕಡಿಮೆಯಾಗುತ್ತದೆಯೇ? ಇದೆಲ್ಲದಕ್ಕೆ ಉತ್ತರ ಇಲ್ಲಿದೆ.

People Over 40 Should Only Work Three Days a Week, Study Concludes

ಮೇಲ್ಬೋರ್ನ್(ಜೂ.29) ನೀವು ವಾರದಲ್ಲಿ ಎಷ್ಟು ದಿನ ಕೆಲಸ ಮಾಡುತ್ತೀರಾ? ಇದೆಂಥ ಪ್ರಶ್ನೆ ವಾರದಲ್ಲಿ 5 ಅಥವಾ 6 ದಿನ ಕೆಲಸ ಮಾಡುತ್ತೇವೆ ಎಂಬ ಉತ್ತರ ನಿಮ್ಮಿಂದ ಬರಬಹುದು. ಆದರೆ ವಾಸ್ತವವೇ ಬೇರೆ. ಇಲ್ಲೊಂದು ಸ್ಟಡಿ ಹೊಸ ಅಂಶವೊಂದನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದೆ.

ಮೆಲ್ಬೋರ್ನ್ ವರ್ಕರ್ ಪೇಪರ್ ಸೀರಿಸ್ ನವರು ಮಾಡಿರುವ ಅಧ್ಯಯನ ಬೇರೆಯದೇ ಸತ್ಯ ಹೇಳುತ್ತಿದೆ. 40 ವರ್ಷ ಮೇಲ್ಪಟ್ಟವರಿಗೆ ವಾರದಲ್ಲಿ ಕೇವಲ ಮೂರು ದಿನ ಮಾತ್ರ ಕೆಲಸ ನೀಡಬೇಕು ಎಂಬ ಸಲಹೆಯನ್ನು ಅಧ್ಯಯನ ನೀಡುತ್ತಿದೆ. ಯಾಕೆ ಹೀಗೆ ಎಂಬುದಕ್ಕೆ ಕಾರಣಗಳ ಸಮೇತ ಉತ್ತರವನ್ನು ನೀಡಿದೆ.

ಅಧ್ಯಯನಕ್ಕೋಸ್ಕರ 40 ವರ್ಷ ಮೇಲ್ಪಟ್ಟ 3,500 ಮಹಿಳೆಯರು ಮತ್ತು 3,000 ಪುರುಷರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರು ಮಾಡುವ ಕೆಲಸ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳ ಮೇಲೆ ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳಲಾಯಿತು. ನಿಗದಿತ ಸಮಯದೊಳಗೆ ಅಂಕೆ ಮತ್ತು ಅಕ್ಷರಗಳನ್ನು ಮ್ಯಾಚ್ ಮಾಡುವುದು, ವಿವಿಧ ಸಂದರ್ಭದ ಪ್ರತಿಕ್ರಿಯೆ ಪಡೆದುಕೊಳ್ಳುವುದು. ದೊಡ್ಡದಾಗಿ ಓದುವುದು.. ಹೀಗೆ ಅನೇಕ ಬಗೆಯ ಟೆಸ್ಟ್ ಗಳನ್ನು ನೀಡಿ ಒಂದು ಅಂತಿಮ ತೀರ್ಮಾನಕ್ಕೆ ಬರಲಾಯಿತು.

ವಾರಕ್ಕೆ 25 ಗಂಟೆ ಕಾಲ ಕೆಲಸ ಮಾಡುವವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡುವವರು ಒತ್ತಡದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.

Follow Us:
Download App:
  • android
  • ios