ಮನಮೋಹನ್ ಸಿಂಗ್ ಅವರಂಥ ವಿದ್ಯಾವಂತ ಪ್ರಧಾನಿ ಬೇಕು: ಕೇಜ್ರಿವಾಲ್

People miss educated PM like Manmohan Singh says Kejriwal
Highlights

ದೇಶದ 10 ರಾಜ್ಯಗಳಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆ ಫಲಿತಾಂಶದ ಬಳಿಕ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಿಪಕ್ಷ ನಾಯಕರು ಮುಗಿಬಿದ್ದಿದ್ದಾರೆ. ಫಲಿತಾಂಶದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ಉಪಚುನಾವಣೆ ಫಲಿತಾಂಶ ಮೋದಿ ವಿರುದ್ದದ ಜನಾಕ್ರೋಶ ಎಂದು ಬಣ್ಣಿಸಿದರು.

ನವದೆಹಲಿ [ಮೇ 31]: ದೇಶದ 10 ರಾಜ್ಯಗಳಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆ ಫಲಿತಾಂಶದ ಬಳಿಕ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಿಪಕ್ಷ ನಾಯಕರು ಮುಗಿಬಿದ್ದಿದ್ದಾರೆ. ಫಲಿತಾಂಶದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ಉಪಚುನಾವಣೆ ಫಲಿತಾಂಶ ಮೋದಿ ವಿರುದ್ದದ ಜನಾಕ್ರೋಶ ಎಂದು ಬಣ್ಣಿಸಿದರು.

ದೇಶದ ಜನತೆ ಮೋದಿ ಆಡಳಿತದಿಂದ ಬೇಸತ್ತಿದ್ದು, ಉಪಚುನಾವಣೆ ಮೂಲಕ ತಮ್ಮ ಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಹೇಳಿದರು. ಮೋದಿ ಅವರಿಗೆ ಪರ್ಯಾಯ ಯಾರು ಎಂದು ಜನ ಕೇಳುತ್ತಿದ್ದು, ಈ ಹಿನ್ನೆಲೆಯಲ್ಲಿ 2019ರ ಲೋಕಸಭೆ ಚುನಾವಣೆ ಗಮನಾರ್ಹವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಮಾಜಿ ಪಿಎಂ ಮನಮೋಹನ್ ಸಿಂಗ್ ಅವರನ್ನು ಶ್ಲಾಘಿಸಿದ ಕೇಜ್ರಿವಾಲ್, ಮನಮೋಹನ್ ಸಿಂಗ್ ಅವರಂಥ ವಿದ್ಯಾವಂತ ಪ್ರಧಾನಿಯನ್ನು ದೇಶ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಅವರು, ನೀತಿ ನಿರೂಪಣೆಯಲ್ಲಿ ಮನಮೋಹನ್ ಅವರನ್ನು ಮೀರಿಸಬಲ್ಲ ಪ್ರಧಾನಿ ಯಾರೂ ಇಲ್ಲ ಎಂದಿದ್ದಾರೆ. 

loader