ಕಮಲ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ 500,522,298,295(ಎ) ಹಾಗೂ 505(ಸಿ) ಅಡಿ ವಕೀಲ ಕಮಲೇಶ್ ಚಂದ್ರ ತ್ರಿಪಾಠಿ ದೂರು ದಾಖಲಿಸಿದ್ದಾರೆ.
ಚೆನ್ನೈ(ನ.04): ಹಿಂದೂಗಳನ್ನು ಅವಹೇಳನ ಮಾಡುವ ನಟ ಕಮಲ್ ಹಾಸನ್ ಥರದವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಹಿರಿಯ ನಾಯಕ ಅಶೋಕ್ ಶರ್ಮಾ ವಿವಾದ ಸೃಷ್ಟಿಸಿದ್ದಾರೆ.
ಇತ್ತೀಚಿಗಷ್ಟೆ ತಮುಳಿನ ವಾರಪತ್ರಿಕೆಯೊಂದರಲ್ಲಿ 'ಹಿಂದೂಗಳಲ್ಲೂ ಭಯೋತ್ಪಾದಕರಿದ್ದಾರೆ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿರುವಮಹಾಸಭಾದ ನಾಯಕ ಅಶೋಕ್ ಶರ್ಮಾ 'ಕಮಲ್ ಹಾಸನ್ ಥರದವರನ್ನು ನೇಣಿಗೇರಿಸಬೇಕು ಅಥವಾ ಗುಂಡಿಕ್ಕಿ ಕೊಲ್ಲಬೇಕೆ ವಿನಃ ನಿಯಂತ್ರಿಸಲು ಮತ್ಯಾವುದೇ ದಾರಿಯಿಲ್ಲ' ಎಂದು' ಹೇಳಿದ್ದಾರೆ.
ಶರ್ಮಾ ಅವರು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಗಿದ್ದಾರೆ. ಅಲ್ಲದೆ ಈ ಮಹಾಸಭಾದ ಸದಸ್ಯರು ಕಮಲ್ ಹಾಸನ್ ಹಾಗೂ ಅವರ ಪುತ್ರಿ ಅಭಿನಯದ ಚಿತ್ರಗಳನ್ನು ಬಹಿಷ್ಕರಿಸಿದ್ದಾರೆ.ಅಲ್ಲದೆ ಈ ರೀತಿ ಹೇಳಿಕೆ ನೀಡುವ ಕಲಾವಿದರ ಚಿತ್ರಗಳನ್ನು ಬಹಿಷ್ಕರಿಸುವುದಾಗಿ ಸಹ ತಿಳಿಸಿದೆ.
ಕಮಲ್ ಹಾಸನ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ವಾರಣಾಸಿಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ಮುಂದಿನ ಹಂತದ ವಿಚಾರಣೆ ನವೆಂಬರ್ 22ರಂದು ನಡೆಯಲಿದೆ. ಕಮಲ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ 500,522,298,295(ಎ) ಹಾಗೂ 505(ಸಿ) ಅಡಿ ವಕೀಲ ಕಮಲೇಶ್ ಚಂದ್ರ ತ್ರಿಪಾಠಿ ದೂರು ದಾಖಲಿಸಿದ್ದಾರೆ.
