ನವದೆಹಲಿ[ಜೂ. 05] ಕಳೆದ 5 ವರ್ಷದಲ್ಲಿ ಭಾರತದ ಸ್ಥಾನಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾಗಿರುವುದನ್ನು  ಭಾರತದ ಬಹುಪಾಲು ಜನರು ಗಮನಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ  ಎಸ್.ಜೈಶಂಕರ್ ಹೇಳಿದ್ದಾರೆ.

ಚೀನಾ ವೇಗವಾಗಿ ಬೆಳೆಯುತ್ತಿದೆ ಅದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಲೋಬಲ್ ರಿಬ್ಯಾಲೆಂಸ್ಸಿಂಗ್ ಆಗುತ್ತಿದೆ. ಜತೆಗೆ ಭಾರತ ಸಹ ತನ್ನಸ್ಥಾನ ಬದಲಾಯಿಸಿಕೊಂಡಿದೆ ಎಂದರು.

ನವದೆಹಲಿಯ ಸೆಮಿನಾರ್ ಒಂದರಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರಕಾರ ಕಳೆದ 5 ವರ್ಷಗಳಿಂದ ದೇಶದ ಹೊರಗೆ ಮತ್ತು ಒಳಗೆ ನಿಂತು ಯೋಜನೆಗಳನ್ನು  ರೂಪಿಸುತ್ತಿದೆ.  ಪ್ರದೇಶ ಆರ್ಥಿಕಾಭಿವೃದ್ಧಿ ಮತ್ತು ಅತ್ಯುತ್ತಮ ವಿದೇಶಾಂಗ ನೀತಿಗೆ ಆದ್ಯತೆ ನೀಡಿಕೊಂಡೇ ಬಂದಿದ್ದೇವೆ ಎಂದರು.