*ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮಾತ್ರ ಕರ್ನಾಟಕ ರಾಜ್ಯ ಹಾಗೂ ಕನ್ನಡ ಭಾಷೆಯನ್ನು ಉತ್ತಮವಾಗಿ ಕಾಪಾಡಬಲ್ಲವು - ಶೇ.5*ಕಾಂಗ್ರೆಸ್ ಹಾಗೂ ಜೆಡಿಎಸ್'ನಿಂದ ಮಾತ್ರ ಕರ್ನಾಟಕ ರಕ್ಷಣೆ ಸಾಧ್ಯ - ಶೇ.5*ಕುಮಾರ ಸ್ವಾಮಿ ನೇತೃತ್ವದ ಜೆಡಿಎಸ್ ಮಾತ್ರ ಕನ್ನಡ ನಾಡಿನ ಹಿತರಕ್ಷಣೆ ಮಾಡಬಲ್ಲದು - ಶೇ.19*ಯಡಿಯೂರಪ್ಪ ನೇತೃತ್ವದ ಬಿಜೆಪಿಯಿಂದ ಮಾತ್ರ ನಾಡು ನುಡಿ ರಕ್ಷಣೆ - ಶೇ.32*ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಮಾತ್ರ ಈ ಕೆಲಸ ಯಶಸ್ವಿಗೊಳಿಸುತ್ತದೆ - ಶೇ.31*ಈ ಬಗ್ಗೆ ನಮಗೆ ಗೊತ್ತಿಲ್ಲ - ಶೇ.7
ಬೆಂಗಳೂರು(ಡಿ.6): ಕನ್ನಡ ನಾಡು ನುಡಿ ರಕ್ಷಣೆಯ ವಿಷಯದಲ್ಲಿ ಕನ್ನಡಿಗರಿಗೆ ಅತಿ ಹೆಚ್ಚು ವಿಶ್ವಾಸವಿರುವುದು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮೇಲೆ! ಹೌದು, ಪ್ರಾದೇಶಿಕ ಪಕ್ಷದಿಂದ ಮಾತ್ರ ನಾಡು-ನುಡಿಯ ಹಿತರಕ್ಷಣೆ ಸಾಧ್ಯ ಎಂದು ಜೆಡಿಎಸ್ ಹೇಳುತ್ತ ಬಂದಿದ್ದರೂ, ಈ ವಿಷಯದಲ್ಲಿ ಜೆಡಿಎಸ್ ಬಗ್ಗೆ ಶೇ.19ರಷ್ಟು ಜನ ಮಾತ್ರ ಒಲವು ತೋರಿದ್ದಾರೆ.
ಬಿಜೆಪಿ ಒಳ್ಳೆಯದು ಎಂದು ಶೇ.32ರಷ್ಟು ಜನರೂ, ಕಾಂಗ್ರೆಸ್ ಒಳ್ಳೆಯದು ಎಂದು ಶೇ.31ರಷ್ಟು ಜನರೂ ಹೇಳಿದ್ದಾರೆ. ಅಂದರೆ ಎರಡೂ ರಾಷ್ಟ್ರೀಯ ಪಕ್ಷಗಳ ಮೇಲೆ ಜನರಿಗೆ ಹೆಚ್ಚುಕಮ್ಮಿ ಸಮಾನ ಒಲವಿದೆ.

ಕುತೂಹಲಕರ ಸಂಗತಿಯೆಂದರೆ, ಮೈತ್ರಿ ಸರ್ಕಾರ ರಚನೆಯಾಗುವುದಾದರೆ ಶೇ.5ರಷ್ಟು ಜನರು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಬೇಕು ಎಂದು ಹೇಳಿದರೆ, ಅಷ್ಟೇ ಪ್ರಮಾಣದ ಅಂದರೆ ಶೇ.5ರಷ್ಟು ಜನರು ಬಿಜೆಪಿ-ಕಾಂಗ್ರೆಸ್ ಮೈತ್ರಿ ಸರ್ಕಾರ ಬರಲಿ ಎಂದಿದ್ದಾರೆ. ಒಳಗುಟ್ಟು ಏನೆಂದರೆ, ಶೇ.7ರಷ್ಟು ಜನರು ಯಾವ ಪಕ್ಷ ನಮ್ಮ ರಾಜ್ಯಕ್ಕೆ ಒಳ್ಳೆಯದು ಎಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಅಂದಿದ್ದಾರೆ. ಅವರು ಚುನಾವಣೆ ಸಮೀಪಿಸುತ್ತಿದ್ದಂತೆ ಯಾರ ಪರ ಒಲವು ತೋರುತ್ತಾರೋ ಆ ಪಕ್ಷಕ್ಕೆ ಲಾಭ ನಿಶ್ಚಿತ.
