Asianet Suvarna News Asianet Suvarna News

ರಾಮಸೇತುವಿನ ಮೋಹಕ ದೃಶ್ಯ ಆಸ್ವಾದಿಸಿದ ಜನ!

ರಾಮಸೇತುವಿನ ಮನಮೋಹಕ ದೃಶ್ಯವನ್ನು ಆಸ್ವಾದಿಸಿದ ಜನ |  ಈ ಸ್ಥಳವನ್ನು ನ್ಯಾಷನಲ್ ಹೆರಿಟೇಜ್ ಸ್ಥಳವಾಗಿ ಘೋಷಿಸಬೇಕೆಂದು ಸ್ವಾಮಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

People enjoy Beautiful seen of Ram Setu
Author
Bengaluru, First Published Oct 8, 2018, 9:16 AM IST

ಬೆಂಗಳೂರು (ಅ. 08): ರಾಮಸೇತುವಿನ ಅದ್ಭುತ ದೃಶ್ಯ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರೊಂದಿಗೆ, ‘ನೋಡಿ ಜನರು ಸಮುದ್ರದ ಮಧ್ಯದಲ್ಲಿ ನಿಂತಿದ್ದಾರೆ! ಇದು ಸಂಪೂರ್ಣ ಇಂಜಿನಿಯರಿಂಗ್ ಮಾರ್ವೆಲ್.

ಇದು ಬೇರಾವ ಸ್ಥಳವೂ ಅಲ್ಲ ಪುರಾಣ ಪ್ರಸಿದ್ಧಿ ಪಡೆದ ರಾಮಸೇತು. ಈ ಸ್ಥಳವನ್ನು ನ್ಯಾಷನಲ್ ಹೆರಿಟೇಜ್ ಸ್ಥಳವಾಗಿ ಘೋಷಿಸಬೇಕೆಂದು ಸ್ವಾಮಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅವರಿಗೆ ಧನ್ಯವಾದ. ಜೈ ಶ್ರೀರಾಮ್’ ಎಂದು ಒಕ್ಕಣೆಯನ್ನು ಬರೆಯಲಾಗಿದೆ.

ವಿಡಿಯೋದಲ್ಲಿ ಸಮುದ್ರದ ವ್ಯೆಹಾತ್ಮಕ  ದೃಶವಿದ್ದು, ಅದರ ಮಧ್ಯಭಾಗದಲ್ಲಿ ನೂರಾರು ಜನರು ಸಾಲುಗಟ್ಟಿ ನಿಂತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಆದರೆ ನಿಜಕ್ಕೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ರಾಮಾಯಣದಲ್ಲಿ ಬರುವ ಪುರಾಣ ಪ್ರಸಿದ್ಧ ರಾಮಸೇತುವಿನದ್ದೇ ಎಂದು ಪರಿಶೀಲಿಸಿದಾಗ ಇದು ರಾಮಸೇತುವಿನ ವಿಡಿಯೋ ಅಲ್ಲ ಎಂಬುದು ದೃಢಪಟ್ಟಿದೆ.

ವಾಸ್ತವವಾಗಿ ಈ ವಿಡಿಯೋ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಪೊನ್ನಾಯ್ ಬೀಚ್. ಇದೇ ಜುಲೈನಲ್ಲಿ ಕೇರಳದಲ್ಲಿ ಭೀಕರ ಪ್ರವಾಹ ಉಂಟಾದ ಬಳಿಕ ಈ ಬೀಚ್‌ನಲ್ಲಿ ಮರಳ ರಾಶಿಯೇ ನಿಂತು ಈ ದೃಶ್ಯ
ಉದ್ಭವವಾಗಿದೆ. ಮರಳಿನ ಮೇಲೆ ನಿಂತು ಬೀಚ್ನ ಅರ್ಧ ದೂರದವರೆಗೂ ಜನರು ನಿಂತಿದ್ದಾರೆ.

ಈ ದೃಶ್ಯವನ್ನು ಅಭಿಲಾಷ್ ವಿಶ್ವ ಎಂಬುವರು ಚಿತ್ರೀಕರಿಸಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದರು. ಅದು ರಾಮಸೇತುವಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ಅಭಿಲಾಷ್ ವಿಶ್ವ ಅವರೇ ಸ್ಪಷ್ಟನೆ ನೀಡಿದ್ದು, ಇದು ರಾಮಸೇತುವಿನ ದೃಶ್ಯ ಅಲ್ಲ. ಕೇರಳದ ಪೊನ್ನಾಯ್ ಸಮುದ್ರತೀರದ ದೃಶ್ಯ ಎಂದಿದ್ದಾರೆ.

-ವೈರಲ್ ಚೆಕ್ 

Follow Us:
Download App:
  • android
  • ios