ಕರ್ನಾಟಕದಲ್ಲೂ ಘಟಕ ಹೊಂದಿದೆ ಎನ್ನಲಾದ ಹೌಸಿಂಗ್ ಸೊಸೈಟಿಯೊಂದು ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುತ್ತಿದ್ದ ಪ್ರಕರಣ ಬಹಿರಂಗವಾಗಿದೆ. ವಿಷಯಕ್ಕೆ ಸಂಬಂಧಿಸಿ ರೀದಾಬಾದ್ ಮೂಲದ ನೋಂದಾಯಿತ ಹೌಸಿಂಗ್ ಸೊಸೈಟಿ ‘ನರೇಂದ್ರ ಮೋದಿ ವಿಚಾರ್ ಮಂಚ್’ ವಿರುದ್ಧ ಸಿಬಿಐ ಎಫ್'ಐಆರ್ ದಾಖಲಿಸಿದೆ.
ನವದೆಹಲಿ(ಆ.13): ಕರ್ನಾಟಕದಲ್ಲೂ ಘಟಕ ಹೊಂದಿದೆ ಎನ್ನಲಾದ ಹೌಸಿಂಗ್ ಸೊಸೈಟಿಯೊಂದು ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುತ್ತಿದ್ದ ಪ್ರಕರಣ ಬಹಿರಂಗವಾಗಿದೆ. ವಿಷಯಕ್ಕೆ ಸಂಬಂಧಿಸಿ ರೀದಾಬಾದ್ ಮೂಲದ ನೋಂದಾಯಿತ ಹೌಸಿಂಗ್ ಸೊಸೈಟಿ ‘ನರೇಂದ್ರ ಮೋದಿ ವಿಚಾರ್ ಮಂಚ್’ ವಿರುದ್ಧ ಸಿಬಿಐ ಎಫ್'ಐಆರ್ ದಾಖಲಿಸಿದೆ.
ಈ ಹೌಸಿಂಗ್ ಸೊಸೈಟಿಗೂ, ಮೋದಿಯವರಿಗೂ ಯಾವುದೇ ಸಂಪರ್ಕವಿಲ್ಲ. ಆದರೆ ಅವರ ಹೆಸರಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತಿತ್ತು ಎಂದು ಆಪಾದಿಸಲಾಗಿದೆ. ಸೊಸೈಟಿಯ ಐಟಿ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷ ಅರವಿಂದ್ ಕುಮಾರ್ ಕದಂ ಕರ್ನಾಟಕದವರೆನ್ನಲಾಗಿದೆ.
www.nmvmindia.org ಎಂಬ ವೆಬ್‌ಸೈಟ್ ಅನ್ನು ಸಂಸ್ಥೆ ನಿರ್ವಹಿಸುತ್ತಿದೆ. ಕರ್ನಾಟಕ ಘಟಕದಲ್ಲಿ ಬಿ.ಎಲ್. ಮಂಜುನಾಥ ಎಂಬವರು ಅಧ್ಯಕ್ಷ, ಪುಷ್ಪಾವತಿ ಉಪಾಧ್ಯಕ್ಷೆ, ಕಿರಣ್ ಕಾರ್ಯದರ್ಶಿ, ಎಸ್. ರಮೇಶ್ ರಾಜ್ಯ ಖಜಾಂಚಿ ಎಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
