ಸರ್ಕಾರಕ್ಕೆ ಪಾಠ ಕಲಿಸುವ ಹಕ್ಕು ಜನರಿಗಿದೆ : ಅಣ್ಣಾ ಹಜಾರೆ

First Published 25, Feb 2018, 4:16 PM IST
People can teach the Govt a Lesson Says Anna Hazare
Highlights

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಜನರು ಸರ್ಕಾರವನ್ನು ಸರಿದಾರಿಗೆ ತರುವಲ್ಲಿ ಸಾಮಾನ್ಯ ಜನತೆ ತಮ್ಮ ಪಾತ್ರವನ್ನು ವಹಿಸಬೇಕು ಎಂದು ಹೇಳಿದ್ದಾರೆ.

ಗೋವಿಂದ ನಗರ : ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಜನರು ಸರ್ಕಾರವನ್ನು ಸರಿದಾರಿಗೆ ತರುವಲ್ಲಿ ಸಾಮಾನ್ಯ ಜನತೆ ತಮ್ಮ ಪಾತ್ರವನ್ನು ವಹಿಸಬೇಕು ಎಂದು ಹೇಳಿದ್ದಾರೆ. ಸರ್ಕಾರಕ್ಕೆ ಪಾಠ ಹೇಳುವ ಹಿಡಿತವನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ. ಸಾಮಾನ್ಯ ಜನರಿಗೆ ಈ ಎಲ್ಲಾ ಹಕ್ಕುಗಳೂ ಕೂಡ ಇರುವುದಾಗಿ ಅವರು ತಿಳಿಸಿದ್ದಾರೆ.

ರಾಜಸ್ಥಾನದ ಗೋವಿಂದ ನಗರದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶೀಸಿ ಮಾತನಾಡಿದ ಅವರು  ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಕೂಡ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಜನರು ಸರ್ಕಾರದ ಆಡಳಿತದಲ್ಲಿ ಮಧ್ಯಪ್ರವೇಶಿಸುವ ಬಗ್ಗೆ ತಮ್ಮ ಪ್ರಾಮುಖ್ಯತೆಯನ್ನು ಅರಿತುಕೊಂಡು ತಮ್ಮ ಕೈಯಲ್ಲಿ ಹಿಡಿತವನ್ನು ಇರಿಸಿಕೊಳ್ಳಬೇಕು ಎಂದು ಹೇಳಿದರು. ಅಲ್ಲದೇ ದೇಶದಾದ್ಯಂತ ಪ್ರಯಾಣ ಬೆಳೆಸಿ ರೈತರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ಯತ್ನ ಮಾಡಲಾಗುತ್ತದೆ ಎಂದೂ ಕೂಡ ಹೇಳಿದರು.

loader