ರಾಜ್ಯದಲ್ಲಿ ಚುನಾವಣೆ ಹತ್ತಿರ ಬರ್ತಿದ್ದಂತೆ ಸರ್ಕಾರದ ಸಮಾವೇಶಗಳು ಜೋರಾಗುತ್ತಿವೆ.. ಇವತ್ತು ಕೂಡ ಕೊಪ್ಪಳದಲ್ಲಿ ಸಮಾವೇಶ ನಡೆಯಿತು. ಆದರೆ ಸರ್ಕಾರದ ಈ ಸಮಾವೇಶ ಜನಸಾಮಾನ್ಯರ ಟೀಕೆಗೆ ಗುರಿಯಾಗಿದೆ.

ಬೆಂಗಳೂರು (ಸೆ.22): ರಾಜ್ಯದಲ್ಲಿ ಚುನಾವಣೆ ಹತ್ತಿರ ಬರ್ತಿದ್ದಂತೆ ಸರ್ಕಾರದ ಸಮಾವೇಶಗಳು ಜೋರಾಗುತ್ತಿವೆ.. ಇವತ್ತು ಕೂಡ ಕೊಪ್ಪಳದಲ್ಲಿ ಸಮಾವೇಶ ನಡೆಯಿತು. ಆದರೆ ಸರ್ಕಾರದ ಈ ಸಮಾವೇಶ ಜನಸಾಮಾನ್ಯರ ಟೀಕೆಗೆ ಗುರಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಪ್ಪಳದಲ್ಲಿ ಇವತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಯೋಜನೆಗಳ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶಕ್ಕೆ ಬರದಿದ್ದರೆ ರೇಷನ್ ರದ್ದು ಮಾಡೋದಾಗಿ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದರಂತೆ. ಇದೇ ಕಾರಣಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದಲೂ ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಇವರನ್ನೆಲ್ಲಾ ಸಮಾವೇಶಕ್ಕೆ ಕರೆತರಲು ಜಿಲ್ಲಾಡಳಿತ 1 ಸಾವಿರ ಬಸ್​ಗಳನ್ನು ನಿಯೋಜನೆ ಮಾಡಿತ್ತು. ಪರಿಣಾಮ ಕೊಪ್ಪಳ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಇನ್ನು ಸಮಾವೇಶದಲ್ಲಿ ಮಂತ್ರಿ ಮಹೋದಯರೆಲ್ಲ ಸರ್ಕಾರದ ಸಾಧನೆಗಳನ್ನ ಹೊಗಳಿದ್ದೇ ಹೊಗಳಿದ್ದು. ಆದರೆ ಸಂಸದ ಕರಡಿ ಸಂಗಣ್ಣ ಮಾತ್ರ ಕೇಂದ್ರದ ಯೋಜನೆಯನ್ನೂ ರಾಜ್ಯ ಸರ್ಕಾರ ತನ್ನದೆಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಮಾತಿನ ಸರದಿ ಬಂದಾಗ ಟಾಂಗ್ ನೀಡಿದರು.

ಒಟ್ಟಿನಲ್ಲಿ ಜನರನ್ನ ಹೆದರಿಸಿ ಸಮಾವೇಶಕ್ಕೆ ಕರೆಯಿಸಿ. ಸಾವಿರಾರು ಬಸ್​ಗಳನ್ನೂ ಸಮಾವೇಶಕ್ಕೆ ಬಳಸಿಕೊಂಡು ಜನರಿಗೆ ತೊಂದರೆ ಕೊಡೋದು ಯಾವ ನ್ಯಾಯ..? ಇದಕ್ಕೆ ಸಿಎಂ ಸಾಹೇಬ್ರೇ ಉತ್ತರಿಸಬೇಕಿದೆ.