ಯಾವ ಪ್ರಾಣಿಗೂ ಕ್ರೀಡೆಯಲ್ಲಿ ಹಿಂಸೆ ನೀಡಬಾರದು, ಮನುಷ್ಯರ ಓಟದ ಸ್ಪರ್ಧೆಯಲ್ಲಿ ಹೊಡೆಯುವುದಿಲ್ಲ, ಅದೇ ರೀತಿ ಕೋಣಗಳ ಓಟ ಇರಬೇಕು  ಎಂದು ಪೇಜಾವರ ಶ್ರೀ ಹೇಳಿದ್ದಾರೆ.

ಉಡುಪಿ (ಜ.24): ಕೋಣಗಳಿಗೆ ಹೊಡೆಯುವುದಕ್ಕೆ ವಿರೋಧವಿದೆ ಎಂದಿರುವ ಉಡುಪಿ ಪೇಜಾವರ ಶ್ರೀಗಳು, ಹಿಂಸಾರಹಿತ ಕಂಬಳಕ್ಕಷ್ಟೇ ತನ್ನ ಬೆಂಬಲವೆಂದು ಹೇಳಿದ್ದಾರೆ. 

ಯಾವ ಪ್ರಾಣಿಗೂ ಕ್ರೀಡೆಯಲ್ಲಿ ಹಿಂಸೆ ನೀಡಬಾರದು, ಮನುಷ್ಯರ ಓಟದ ಸ್ಪರ್ಧೆಯಲ್ಲಿ ಹೊಡೆಯುವುದಿಲ್ಲ, ಅದೇ ರೀತಿ ಕೋಣಗಳ ಓಟ ಇರಬೇಕು ಎಂದು ಅವರು ಹೇಳಿದ್ದಾರೆ.

ಜಲ್ಲಿಕಟ್ಟು ಕ್ರೀಡೆಯಲ್ಲಿನ ಹಿಂಸೆ ಕಂಬಳಕ್ಕೆ ಹೋಲಿಸಲಾಗದು ಎಂದಿರುವ ಪೇಜಾವರ ಶ್ರೀ, ಅಹಿಂಸಾತ್ಮ ಕಂಬಳ ನಡೆಸುವಂತೆ ಹೋರಾಟಗಾರರಿಗೆ ಮನವಿ ಮಾಡಿದ್ದಾರೆ.