ದೃಷ್ಟಿ ಹೀನ ಗಿಡುಗಕ್ಕೆ ಪೇಜಾವರ ಶ್ರೀಗಳ ವಿಶೇಷ ಮಮಕಾರ

First Published 11, Feb 2018, 9:33 AM IST
Pejavara Shri give Treatment to Eagle
Highlights

  ಗಾಯಗೊಂಡ ಜಟಾಯುವಿಗೆ ಶ್ರೀರಾಮ ಮೋಕ್ಷ ನೀಡಿದ ಕಥೆ ಕೇಳಿದ್ದೇವೆ. ಉಡುಪಿಯಲ್ಲಿ ಗಾಯಗೊಂಡ ಜಟಾಯು ರೂಪದ ಗಿಡುಗವೊಂದಕ್ಕೆ ಪೇಜಾವರ ಶ್ರೀಗಳು ವಿಶೇಷ ಮಮಕಾರ ತೋರಿದ್ದಾರೆ. 

ಉಡುಪಿ [ಫೆ.11]:  ಗಾಯಗೊಂಡ ಜಟಾಯುವಿಗೆ ಶ್ರೀರಾಮ ಮೋಕ್ಷ ನೀಡಿದ ಕಥೆ ಕೇಳಿದ್ದೇವೆ. ಉಡುಪಿಯಲ್ಲಿ ಗಾಯಗೊಂಡ ಜಟಾಯು ರೂಪದ ಗಿಡುಗವೊಂದಕ್ಕೆ ಪೇಜಾವರ ಶ್ರೀಗಳು ವಿಶೇಷ ಮಮಕಾರ ತೋರಿದ್ದಾರೆ. 

ಸನ್ಯಾಸಿಗಳಿಗೆ ಸಕಲ ಜೀವರಾಶಿಯ ಮೇಲೂ ಮಮತೆ ಇರುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ದೃಷ್ಟಿಹೀನ ಮರಿಗಿಡುಗವೊಂದು ಉಡುಪಿಯ ಪೇಜಾವರ ಮಠದ ಆವರಣದಲ್ಲಿ,  ದಾರಿ ಕಾಣದೆ ಒದ್ದಾಡುತ್ತಿತ್ತು. ಅಲ್ಲಿದ್ದವರು ಗಾಯಾಳು ಗಿಡುಗವನ್ನು ಪೇಜಾವರ ಶ್ರೀಗಳ ಕೈಗೆ ಒಪ್ಪಿಸಿದರು.  ಪಕ್ಷಿಯ ಸ್ಥಿತಿ ಕಂಡು ಸ್ವಾಮೀಜಿ ಮರುಗಿ ನೇತ್ರ ಚಿಕಿತ್ಸೆ ನೀಡಿದ್ದಾರೆ.  ನೇತ್ರತಜ್ಞರ ಸಲಹೆ ಪಡೆದರು, ವಿಶೇಷ ಆರೈಕೆ ಮಾಡಿ ಸಲಹುತಿದ್ದಾರೆ.

ಇದೊಂದು ಅಪರೂಪದ ಪ್ರಸಂಗ. ಮನುಷ್ಯನ ಕಣ್ಣಿಗೆ ತಜ್ಞ ಚಿಕಿತ್ಸೆ ನೀಡುವ ವೈದ್ಯರೇ ಗಿಡುಗಕ್ಕೆ ದೃಷ್ಟಿ ಬರಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಗಳೂರಿನ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಆರಂಭಿಸಿದ್ದಾರೆ. ಹತ್ತು ದಿನಗಳ ಕಾಲ ಐ ಡ್ರಾಪ್ಸ್ ಹಾಕಲಾಗುತ್ತೆ. ನಂತರ ವಿಶೇಷ ಪರಿಕರಗಳನ್ನು ತಂದು ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ತೀರ್ಮಾನಿಸಿದ್ದಾರೆ. 

loader