ಕರ್ನೂಲ್ ಬಳಿ ಪೇಜಾವರ ಶ್ರೀಗಳಿಗೆ ಉಳುಕಿದ ಬೆನ್ನು : 15 ದಿನ ವಿಶ್ರಾಂತಿಗೆ ವೈದ್ಯರ ಸಲಹೆ

First Published 20, Jan 2018, 6:46 PM IST
Pejavara shree hospitalized
Highlights

ರಾತ್ರಿ 9 ಗಂಟೆ ಸಮಯದಲ್ಲಿ  ಪ್ರಯಾಣಿಸುತ್ತಿದ್ದಾಗ ಕರ್ನೂಲಿನ ಪೆದ್ದಪಾಡು ಬಳಿ ರಸ್ತೆ ಉಬ್ಬುಗಳಿದ್ದ ಕಾರಣ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಬೆನ್ನು ಉಳುಕಿದೆ.

ಉಡುಪಿ(ಜ.20): ಪೇಜಾವರ ಶ್ರೀಗಳು ನಿನ್ನೆ ಮಂತ್ರಾಲಯದಿಂದ ಹೈದರಾಬಾದ್'ಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೆನ್ನು ಉಳುಕಿ 15 ದಿನ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.

ರಾತ್ರಿ 9 ಗಂಟೆ ಸಮಯದಲ್ಲಿ  ಪ್ರಯಾಣಿಸುತ್ತಿದ್ದಾಗ ಕರ್ನೂಲಿನ ಪೆದ್ದಪಾಡು ಬಳಿ ರಸ್ತೆ ಉಬ್ಬುಗಳಿದ್ದ ಕಾರಣ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಬೆನ್ನು ಉಳುಕಿದೆ. ಆಯಾಸಗೊಂಡ ಶ್ರೀಗಳನ್ನು ಕರ್ನೂಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೈದರಾಬಾದ್'ನಿಂದ ಉಡುಪಿಗೆ ತೆರಳಿದ್ದರು.

ಬೆಳಿಗ್ಗೆ ಮಠದಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಸಂಜೆ ಸ್ಕ್ಯಾನಿಂಗಾಗಿ ಹೈಟೆಕ್ ಆಸ್ಪತ್ರೆಗೆ ಕರೆದೊಯ್ದಿದ್ದ ವೈದ್ಯರ ತಂಡ ಸ್ಕಾನಿಂಗ್ ನಂತರ ಮತ್ತೆ ಮಠಕ್ಕೆ ಮರಳಿದ್ದಾರೆ. ನನಗೆ ಬೆನ್ನು ನೋವಿದೆ ಸ್ವಲ್ಪವೂ ನೆಡದಾಡಲು ಆಗುತ್ತಿಲ್ಲ' ಎಂದು ಸ್ವತಃ ಶ್ರೀಗಳು ಹೇಳಿದ್ದು, 15 ದಿನ ಎಲ್ಲೂ ಓಡಾಡದಂತೆ ವೈದರು ಶ್ರೀಗಳಿಗೆ ಸೂಚನೆ ನೀಡಿದ್ದಾರೆ.

loader