ನವದೆಹಲಿ(ಅ.28): ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟಿನ ಅಗತ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಶಾಂತಿ ಬಯಸುವುದು ಎಂದರೆ ಯುದ್ಧ ಇಲ್ಲ ಎಂದಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

ಅತ್ಯಂತ ಬಡವರ ಅಭಿವೃದ್ಧಿಯೂ ಸಹ ಶಾಂತಿಯ ಸಂಕೇತವೇ. ವಿಶ್ವದಲ್ಲಿ ಶಾಂತಿಯ ಬಗ್ಗೆ ಚರ್ಚೆ ನಡೆದಾಗಲೆಲ್ಲಾ ಭಾರತದ ಹೆಸರು ಮತ್ತು ಕೊಡುಗೆಗಳನ್ನು ಸುವರ್ಣಾಕ್ಷರಗಳಲ್ಲಿ ಉಲ್ಲೇಖಿಸಲಾಗುತ್ತದೆ  ಎಂದು ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ. 

ಇದೇ ವೇಳೆ ಮೊದಲ ವಿಶ್ವ ಯುದ್ಧದ ಬಗ್ಗೆಯೂ ಮಾತನಾಡಿರುವ ಪ್ರಧಾನಿ ಮೋದಿ, ವಿಶ್ವಯುದ್ಧ-1 ರಲ್ಲಿ ಭಾರತ ನೇರವಾಗಿ ಭಾಗಿಯಾಗಿರಲಿಲ್ಲವಾದರೂ ಭಾರತದ ಅನೇಕ ಯೋಧರು ಹೋರಾಡಿ ಬಲಿದಾನ ಮಾಡಿದ್ದಾರೆ.  ಯುದ್ಧದಲ್ಲಿ ತಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ಭಾರತೀಯ ಯೋಧರು ತೋರಿಸಿಕೊಟ್ಟಿದ್ದಾರೆ ಎಂದು ಪ್ರಧಾನಿ ಮೋದಿ ಹೇಳ್ದಿದಾರೆ.