ಜಮ್ಮು ಕಾಶ್ಮೀರದ ಪಿಡಿಪಿ ಮುಖಂಡ ಮುಜಾಫರ್ ಹುಸೇನ್ ಬೇಗ್ ದೇಶದಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ ಇಂತಹ ಪ್ರಕರಣಗಳನ್ನು ತಡೆಯದಿದ್ದರೆ ದೇಶ ಮತ್ತೊಮ್ಮೆ ವಿಭಜನೆಯಾಗಲಿದೆ ಎಂದು ಹೇಳಿದ್ದಾರೆ.

ಶ್ರೀನಗರ: ಗೋವಿನ ಕಳ್ಳ ಸಾಗಾಟಗಾರ ಎಂಬ ಆರೋಪದ ಮೇರೆಗೆ ರಾಜಸ್ಥಾನದ ಅಲ್ವರ್‌ನಲ್ಲಿ ಅಕ್ಬರ್ ಖಾನ್ ಎಂಬಾತನನ್ನು ಬಡಿದು ಹತ್ಯೆಗೈದ ಬೆನ್ನಲ್ಲೇ, ‘ಗೋರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಹತ್ಯೆ ಘಟನೆಗಳನ್ನು ತಡೆಯಬೇಕು. 

ಇಲ್ಲದಿದ್ದರೆ, ದೇಶ ಮತ್ತೊಮ್ಮೆ ವಿಭಜನೆಯಾಗಲಿದೆ’ ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಆಪ್ತ ಪಿಡಿಪಿ ಹಿರಿಯ ಮುಖಂಡ ಮುಜಾಫರ್ ಹುಸೇನ್ ಬೇಗ್ ವಿವಾದಿತ ಹೇಳಿಕೆ ನೀಡಿದ್ದಾರೆ. ‘ಇಂಥ ಘಟನೆ ತಡೆಯದಿದ್ದರೆ ಅದರ ಪರಿಣಾಮ ಸರಿಯಿರುವುದಿಲ್ಲ. ಈಗಾಗಲೇ 1947 ರಲ್ಲಿ ದೇಶ ಇಬ್ಭಾಗವಾಗಿದೆ,’ ಎಂದಿದ್ದಾರೆ.