ಕೇರಳದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಱಲಿ ಕರ್ನಾಟಕದ ಕಡೆ ಆಗಮಿಸುತ್ತಿದೆ.

ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ನಾಸೀರ್ ಮದನಿ ಬಿಡುಗಡೆಗೆ ಆಗ್ರಹ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ರ‌್ಯಾಲಿ ಆರಂಭಿಸಿದೆ. ಕೇರಳದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ರ‌್ಯಾಲಿ ಕರ್ನಾಟಕದ ಕಡೆ ಆಗಮಿಸುತ್ತಿದೆ. ರ‌್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮಾರ್ಗದ ರಸ್ತೆಯನ್ನ ಪೊಲೀಸರು ಬಂದ್​ ಮಾಡಿದ್ದಾರೆ. ಜೊತೆಗೆ ಮುಂಜ್ರಾಗತ ಕ್ರಮವಾಗಿ ಚಾಮರಾಜನಗರದ ಗುಂಡ್ಲುಪೇಟೆಯಿಂದ ಕೇರಳದ ಕಡೆಯ ವಾಹನ ಸಂಚಾರ ಕೂಡ ಪೊಲೀಸರು ಸ್ಥಗಿತಗೊಳಿಸಿದ್ದಾರೆ.