ಪೇದೆ ಸುಭಾಷ್ ಕುಮಾರ್ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಶುರುವಾಗಿದೆ. ನಿನ್ನೆ ನಡೆದ ಈ ಘಟನೆಯ ಬಗ್ಗೆ ಹಲವಾರು ಅನುಮಾನಗಳು ಶುರುವಾಗಿದ್ವು. ಈಗ ಆ ಪ್ರಕರಣಕ್ಕೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸುಭಾಷ್ನೇ ಕೊಲೆಗಾರ ಎಂಬ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಹೆಡ್ ಕಾನ್ಸ್ಟೇಬಲ್ ಸುಭಾಷ್ ವಿರುದ್ಧ ಕೊಲೆ ,ಆತ್ಮಹತ್ಯೆಗೆ ಯತ್ನ ಮತ್ತು ಆತ್ಮ ಹತ್ಯೆ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು (ಮೇ.24): ಪೇದೆ ಸುಭಾಷ್ ಕುಮಾರ್ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಶುರುವಾಗಿದೆ. ನಿನ್ನೆ ನಡೆದ ಈ ಘಟನೆಯ ಬಗ್ಗೆ ಹಲವಾರು ಅನುಮಾನಗಳು ಶುರುವಾಗಿದ್ವು. ಈಗ ಆ ಪ್ರಕರಣಕ್ಕೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸುಭಾಷ್ನೇ ಕೊಲೆಗಾರ ಎಂಬ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಹೆಡ್ ಕಾನ್ಸ್ಟೇಬಲ್ ಸುಭಾಷ್ ವಿರುದ್ಧ ಕೊಲೆ ,ಆತ್ಮಹತ್ಯೆಗೆ ಯತ್ನ ಮತ್ತು ಆತ್ಮ ಹತ್ಯೆ ಪ್ರಕರಣ ದಾಖಲಿಸಿದ್ದಾರೆ.
ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರುವ ಸುಭಾಷ್ನನ್ನ ಸಂಜೆ ವೇಳೆ ನಾರ್ಮಲ್ ವಾರ್ಡ್ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ನಂತರ ಆತನ ವಿಚಾರಣೆ ಮುಂದುವರೆಯಲಿದೆ . ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು, ಸುಭಾಷ್ ಸಿಎಂ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಬೆಟ್ಟಿಂಗ್ನಲ್ಲಿ ಮುಳುಗಿರುತ್ತಿದ್ದ ಎಂದು ಆರೋಪಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಚಟದಿಂದ ವಿಪರೀತ ಸಾಲ ಮಾಡಿಕೊಂಡಿದ್ದಕ್ಕೆ ಸಾಲಗಾರರು ಪದೇ ಪದೇ ಕೇಳುತ್ತಿದ್ದರು. ಹೀಗಾಗಿ ಈತ ತನ್ನ ಕುಟುಂಬದೊಂದಿಗೆ ಸಾವಿಗೆ ಶರಣಾಗಲು ಮುಂದಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ ಈ ಕೃತ್ಯ ಪೂರ್ವ ನಿಯೋಜಿತನಾ ಅನ್ನೋ ಅನುಮಾನ ಶುರುವಾಗಿದೆ. ಯಾಕೆಂದರೆ ಸುಭಾಷ್ ತನ್ನ ಸೋದರನಿಗೆ ಆತ್ಮಹತ್ಯೆಗೂ ಮುನ್ನಾ ದಿನವೇ ಕರೆ ಮಾಡಿ ಬೆಳಗ್ಗೆ ಬರುವುದಕ್ಕೆ ಹೇಳಿದ್ದನೆಂದು ಪೊಲೀಸ್ ಮೂಲಗಳ ಮಾಹಿತಿ ಹೇಳುತ್ತವೆ. ಇದರಿಂದ ಈತ ತನ್ನ ಕುಟುಂಬಕ್ಕೆ ವಿಷವನ್ನ ಇಂಜೆಕ್ಟ್ ಮಾಡಿ ಅವರು ಸತ್ತ ಬಳಿಕ ಟ್ಯಾಬ್ಲೆಟ್ ನುಂಗಿ ಆತ್ಮ ಹತ್ಯೆಗೆ ಯತ್ನಿಸುವಂತೆ ನಾಟಕವಾಡಿದ್ದಾನಾ ಅನ್ನೋ ಅನುಮಾನ ಶುರುವಾಗಿದೆ. ಇನ್ನು ಈ ಸಂಬಂಧ ಕೊಟ್ರೇಶ್ನನ್ನೂ ತನಿಖೆಗೊಳಪಡಿಸುವ ಸಾಧ್ಯತೆ ಇದೆ.
ಸದ್ಯ ವಿಪರೀತ ಶೊಕಿಲಾಲನಾಗಿದ್ದ ಸುಭಾಷ್ ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿದ್ದಲ್ಲಿ ಆತನೂ ವಿಷ ಸೇವಿಸುತ್ತಿದ್ದ ಆದರೆ ಆತ ಸ್ಲೀಪಿಂಗ್ ಟ್ಯಾಬ್ಲೆಟ್ ನುಂಗಿದ್ಯಾಕೆ ಎಂಬ ಹಲವಾರು ಪ್ರಶ್ನೆಗಳು ಮೂಡಿದೆ. ಈತನ ವಿರುದ್ಧ ಸಂಪಿಗೆ ಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
