ನೀವು ಒಂದ್ಸಲ ಟ್ರೈ ಮಾಡ್ಬೇಕು ಅನ್ಸಿದ್ರೆ ಚೈನಾದಲ್ಲಿ ನೆಲೆಯೂರೋಕೆ ಮನಸ್ಸು ಮಾಡ್ಬೇಕು ಅಷ್ಟೆ..!

ಗ್ರಾಹಕರನ್ನು ಸೆಳೆಯಲು ವ್ಯಾಪಾರಸ್ಥರು ನಾನಾ ರೀತಿಯ ಆಫರ್'ಗಳನ್ನು ನೀಡುವುದನ್ನು ನೋಡಿರುತ್ತೇವೆ. ಅದರಲ್ಲಿ ಕೆಲವು ಆಫರ್'ಗಳು ಒಂದೆರಡು ದಿನಕ್ಕೆ ಸೀಮಿತವಾಗಿದ್ದರೆ, ಮತ್ತೆ ಕೆಲವು ಆಫರ್'ಗಳು ಒಂದು ತಿಂಗಳುಗಳ ಕಾಲವೂ ಇರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಚೀನಾದ ಮದ್ಯ ಮಾರಾಟ ಕಂಪನಿಯೊಂದು ತನ್ನ ಗ್ರಾಹಕರಿಗೆ ಒಮ್ಮೆ ಹಣ ಪಾವತಿಸಿದರೆ ಜೀವನ ಪೂರ್ತಿ ಮದ್ಯ ನೀಡುವುದಾಗಿ ಭರ್ಜರಿ ಆಫರ್ ನೀಡಿದೆ. ಚೀನಾದಲ್ಲಿ ಜನಪ್ರಿಯವಾಗಿರುವ ಬಾಜಿಜು ಎಂಬ ಮದ್ಯವನ್ನು ಮಾರಾಟ ಮಾಡುವ ಇ-ಕಾಮರ್ಸ್ ವೆಬ್'ಸೈಟ್ ಟಿಮಾಲ್.ಕಾಮ್ ಆಫರ್ ಪ್ರಕಟಿಸಿದ್ದು ಒಂದು ಬಾರಿಗೆ 10.86 ಲಕ್ಷ ರುಪಾಯಿ ನೀಡಿದರೆ ಜೀವನ ಪೂರ್ತಿ ಮದ್ಯ ಪೂರೈಸುವುದಾಗಿ ಹೇಳಿದೆ.

ಈ ಆಫರ್'ನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 12 ಪ್ಯಾಕೇಟ್'ನಂತೆ ಜೀವನಪೂರ್ತಿ ಮದ್ಯ ಪೂರೈಸುವುದಾಗಿ ಕಂಪನಿ ಆಫರ್ ನೀಡಿದೆ.

ನೀವು ಒಂದ್ಸಲ ಟ್ರೈ ಮಾಡ್ಬೇಕು ಅನ್ಸಿದ್ರೆ ಚೈನಾದಲ್ಲಿ ನೆಲೆಯೂರೋಕೆ ಮನಸ್ಸು ಮಾಡ್ಬೇಕು ಅಷ್ಟೆ..!