ಕೆಲವು ಅನಿವಾಸಿ ಭಾರತೀಯರು ಹಾಗೂ ಕೆಲವು ಏಜೆಂಟರು 500 ರು. ಹಾಗೂ 1000 ರು. ಹಳೆಯ ನೋಟುಗಳನ್ನು ಭಾರಿ ಮೊತ್ತದ ಕಮಿಶನ್‌ಗೆ ಬದಲಾಯಿಸಿಕೊಡುವ ದಂಧೆ ನಡೆಸುತ್ತಿರುವ ವಿಷಯ ಬಯಲಾಗಿದೆ.
ದೇಶವಾಸಿಗಳಿಗೆ ಹಳೆಯ ನೋಟುಗಳನ್ನು ಹೊಸ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಡಿಸೆಂಬರ್ 30ರವರೆಗೆ ಮಾತ್ರ ಅವಕಾಶವಿತ್ತು. ಆದರೆ ಅನಿವಾಸಿ ಭಾರತೀಯರಿಗೆ ಜೂನ್ 30ರವರೆಗೆ ಅವಕಾಶವಿದೆ. ಹೀಗಾಗಿ ದೇಶದಲ್ಲಿ ಇನ್ನೂ ಹಳೆಯ ನೋಟಿನ ರೂಪದಲ್ಲಿ ಕಪ್ಪುಹಣ ಇಟ್ಟುಕೊಂಡಿರುವ ಕಾಳಧನಿಕರು, ‘ಬಂದಷ್ಟುಬಂತು' ಎಂಬ ಧೋರಣೆ ಅನುಸರಿಸಿ ಎನ್ಆರ್ಐಗಳನ್ನು ಬಳಸಿಕೊಂಡು ಭಾರಿ ಮೊತ್ತದ ಕಮಿಶನ್ ನೀಡಿ ಹಣ ವಿನಿಮಯ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಗಿದೆ.
ಹೆಸರು ಹೇಳಲಿಚ್ಛಿಸದ ಮಧ್ಯವರ್ತಿಯೊಬ್ಬ ಹೇಳುವಂತೆ, ‘100ಕ್ಕೆ 9 ರು.ನಂತೆ ವಿನಿಮಯ ನಡೆದಿದೆ. ಅಂದರೆ ಭಾರತದಲ್ಲಿನ ಕಾಳಧನಿಕನೊಬ್ಬ ತನ್ನ ಬಳಿ ಹಳೇ ನೋಟಿನ ರೂಪದಲ್ಲಿರುವ 1 ಕೋಟಿ ರು. ನೀಡಿದರೆ ಆತನಿಗೆ ಸಿಗುವುದು ಹೊಸ ನೋಟಿನ ರೂಪದಲಿರುವ 9 ಲಕ್ಷ ರು. ಮಾತ್ರ. ಇನ್ನು ಮಧ್ಯವರ್ತಿಗೆ 1 ಲಕ್ಷ ರು. ಸಿಗುತ್ತದೆ. ಮಿಕ್ಕೆಲ್ಲ ಹಣ ಎನ್ಆರ್ಐಗೆ ಹೋಗುತ್ತದೆ'.
