ಅಮೆರಿಕದ ಜನಾಂಗೀಯ ರಾಜಕಾರಣದ ಕುರಿತ ಕಾದಂಬರಿ ಇದಾಗಿದ್ದು, ಪೌಲ್‌ರ ಸಾಹಿತ್ಯವನ್ನು ಮಾರ್ಕ್ ಟ್ವೈನ್ ಮತ್ತು ಜೊನಾಥನ್ ಸ್ವಿಪ್ಟ್‌ರ ಸಾಹಿತ್ಯ ಪ್ರಕಾರದೊಂದಿಗೆ ಹೋಲಿಸಲಾಗಿದೆ.

ಲಂಡನ್(ಅ.27): ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿಗೆ ಅಮೆರಿಕನ್ ಲೇಖಕ ಪೌಲ್ ಬಿಯಾಟಿ ಆಯ್ಕೆಯಾಗಿದ್ದಾರೆ. ತಮ್ಮ ವಿಬಂಡನಾತ್ಮಕ ಕಾದಂಬರಿ ‘ದ ಸೆಲ್ಲೌಟ್’ಗಾಗಿ ಅವರು ಈ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪ್ರತಿಷ್ಠಿತ ಜಾಗತಿಕ ಪ್ರಶಸ್ತಿಗೆ ಆಯ್ಕೆಯಾದ ಪ್ರಪ್ರಥಮ ಅಮೆರಿಕನ್ ಸಾಹಿತಿ ಎಂಬ ದಾಖಲೆ ನಿರ್ಮಾಣವಾಗಿದೆ. ಅಮೆರಿಕದ ಜನಾಂಗೀಯ ರಾಜಕಾರಣದ ಕುರಿತ ಕಾದಂಬರಿ ಇದಾಗಿದ್ದು, ಪೌಲ್‌ರ ಸಾಹಿತ್ಯವನ್ನು ಮಾರ್ಕ್ ಟ್ವೈನ್ ಮತ್ತು ಜೊನಾಥನ್ ಸ್ವಿಪ್ಟ್‌ರ ಸಾಹಿತ್ಯ ಪ್ರಕಾರದೊಂದಿಗೆ ಹೋಲಿಸಲಾಗಿದೆ.

ಆಫ್ರಿಕನ್-ಅಮೆರಿಕನ್ ವ್ಯಕ್ತಿಯು ಲಾಸ್‌ಏಂಜಲೀಸ್‌ನಲ್ಲಿ ತನ್ನ ನೆರೆ ಮನೆಯವನಿಂದ ಎದುರಿಸುವ ಜನಾಂಗೀಯ ಬೇಧದ ಅನುಭವವನ್ನಾಧರಿಸಿದ ಕಥಾವಸ್ತುವನ್ನು ಈ ಕಾದಂಬರಿ ಹೊಂದಿದೆ. 40 ಲಕ್ಷ ನಗದು ಹಾಗೂ ಬಹುಮಾನವನ್ನು ಮಂಗಳವಾರ ರಾತ್ರಿ ಲಂಡನ್‌ನ ಗಿಲ್ಡ್‌ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪೌಲ್ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಪೌಲ್ ಅತ್ಯಂತ ಭಾವುಕರಾಗಿ ಮಾತನಾಡಿದರು. ‘‘ಬರಹವನ್ನು ನಾನು ದ್ವೇಷಿಸುತ್ತೇನೆ. ಇದೊಂದು ಕಠಿಣ ಪುಸ್ತಕ, ಇದನ್ನು ಬರೆಯಲು ನಾನು ತುಂಬಾ ಕಠಿಣ ಶ್ರಮ ಹಾಕಿದ್ದೇನೆ. ಇದನ್ನು ಓದುವುದೂ ಕಷ್ಟವೆಂಬುದು ನನಗೆ ಗೊತ್ತಿದೆ. ಪ್ರತಿಯೊಬ್ಬರೂ ಈ ಪುಸ್ತಕದ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯ ಹೊಂದುತ್ತಾರೆ’’ ಎಂದು ಪೌಲ್ ಹೇಳಿದ್ದಾರೆ.

ನಾಲ್ಕು ಗಂಟೆಗಳ ಸಮಾಲೋಚನೆಯ ಬಳಿಕ ಈ ಕಾದಂಬರಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಮಾಂಡ ೆರ್‌ಮ್ಯಾನ್ ಹೇಳಿದ್ದಾರೆ. ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಪೌಲ್, ಸ್ಲಂಬರ್‌ಲ್ಯಾಂಡ್, ಟ್, ದ ವೈಟ್ ಬಾಯ್ ಶಲ್ ಎಂಬ ಇತರ ಮೂರು ಜನಪ್ರಿಯ ಕಾದಂಬರಿಗಳನ್ನು ರಚಿಸಿದ್ದಾರೆ. ಐವರು ಸಾಹಿತಿಗಳ ಪುಸ್ತಕಗಳು ಅಂತಿಮ ಸುತ್ತಿಗೆ ಆಗಮಿಸಿದ್ದವು. ಅವುಗಳಲ್ಲಿ ಇಬ್ಬರು ಬ್ರಿಟಿಷ್, ಇಬ್ಬರು ಅಮೆರಿಕನ್ ಮತ್ತು ಓರ್ವ ಕೆನಡಿಯನ್ ಲೇಖಕರ ಪುಸ್ತಕಗಳು ಸೇರಿದ್ದವು.