ಏರ್’ಪೋರ್ಟ್’ನಲ್ಲಿ ಖಾದರ್ ಎಂದಾಕ್ಷಣ 2 ಬಾರಿ ತಪಾಸಣೆ

Patience Is Important For Social Life Says Khader
Highlights

ವಿಮಾನ ನಿಲ್ದಾಣದಲ್ಲಿ ‘ಖಾದರ್’ ಎಂದಾಕ್ಷಣ ಸ್ವತಃ ತಮ್ಮನ್ನೂ ಅನೇಕ ಸಂದರ್ಭದಲ್ಲಿ ಅನುಮಾನದಿಂದ ಎರಡೆರಡು ಬಾರಿ ಪರಿಶೀಲಿಸಿದ್ದು, ಬೇಸರ ಮೂಡಿಸಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಧಾರವಾಡ(ಜ.14): ವಿಮಾನ ನಿಲ್ದಾಣದಲ್ಲಿ ‘ಖಾದರ್’ ಎಂದಾಕ್ಷಣ ಸ್ವತಃ ತಮ್ಮನ್ನೂ ಅನೇಕ ಸಂದರ್ಭದಲ್ಲಿ ಅನುಮಾನದಿಂದ ಎರಡೆರಡು ಬಾರಿ ಪರಿಶೀಲಿಸಿದ್ದು, ಬೇಸರ ಮೂಡಿಸಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ವೆಲ್ಫೇರ್ ಅಸೋಸಿಯೇಶನ್ ಆಯೋಜಿಸಿದ್ದ ರಾಜ್ಯ ಮಟ್ಟದ ಸರ್ಕಾರಿ ಮುಸ್ಲಿಂ ನೌಕರರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಅಧಿಕಾರಿಗಳನ್ನು ಅನುಮಾನದಿಂದ ಕಾಣುವ ಪರಿಸ್ಥಿತಿ ಸಮಾಜದಲ್ಲಿದ್ದು, ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

loader