ದೇವಾಲಯ ನಿರ್ಮಾಣಕ್ಕೆ ಮೂರೇ ಗಂಟೆಯಲ್ಲಿ 150 ಕೋಟಿ ಸಂಗ್ರಹ..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 11:02 AM IST
Patidars pledge Rs 150 crore in 3 hours for temple
Highlights

ದೇವಾಲಯ ನಿರ್ಮಾಣ ಮಾಡಲು ದಾಖಲೆ ಪ್ರಮಾಣದಲ್ಲಿ ಹಣ ಸಂಗ್ರಹವಾದ ಅಚ್ಚರಿದಾಯ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಪಾಟೀದಾರ್ ದೇವರ ದೇವಾಲಯಕ್ಕೆ ಮೂರು ಗಂಟೆಯಲ್ಲಿ  150 ಕೋಟಿ ಹಣ ಸಂಗ್ರಹವಾಗಿದೆ. 

ಅಹಮದಾಬಾದ್: ಗುಜರಾತ್‌ನ ಪಾಟಿದಾರ್  ಸಮುದಾಯದ ಸಭೆಯೊಂದರಲ್ಲಿ ಹಣದ ಹೊಳೆಯೇ ಹರಿದಿದೆ. ಸಮುದಾಯದ ಕುಲದೇವರ ದೇಗುಲ ಕಟ್ಟುವ ವಿಷಯದಲ್ಲಿ ವಿಶ್ವ ಉಮಿಯಾ ಫೌಂಡೇಶನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 3 ಗಂಟೆಗಳಲ್ಲಿ 150 ಕೋಟಿ ರು.  ಸಂಗ್ರಹವಾಗಿದೆ.

ಅಂದರೆ, ಪ್ರತಿ ನಿಮಿಷಕ್ಕೆ 84 ಲಕ್ಷ ರು.ಗಳಂತೆ ದೇಣಿಗೆ ಸಂಗ್ರಹವಾಗಿದೆ. ಸುಮಾರು 40 ಎಕರೆ  ವಿಸ್ತಾರದಲ್ಲಿ ವಿಶ್ವ ಉಮಿಯಧಾಮ್ ಎಂಬ ದೇವಸ್ಥಾನ-ಸಮುದಾಯ ಭವನ ನಿರ್ಮಾಣಕ್ಕಾಗಿ ವಂತಿಗೆ ಸಂಗ್ರಹಿಸಲಾಗಿದೆ.

1000 ಕೋಟಿ ರು. ಮೌಲ್ಯದ ಈ ಯೋಜನೆ 2024ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ.  

loader