ಇತ್ತಿಚಿನ ದಿನಗಳಲ್ಲಿ ಹಳ್ಳಿಯ ಬಡ ಜನರೂ ಕೂಡ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಯಾಕೆ ಕಳಿಸುವುದಿಲ್ಲ ಎನ್ನುವ ಪ್ರಶ್ನೆಗೆ ನೂರಾರು ಕಾರಣಗಳು ಸಿಗುತ್ತವೆ. ಇಂತಹದೇ ಒಂದು ಪ್ರಶ್ನೆಗೆ  ಆನೇಕಲ್​ ಶಾಲೆ ಉತ್ತರ ನೀಡುತ್ತೆ.

ಆನೇಕಲ್: ಇತ್ತಿಚಿನ ದಿನಗಳಲ್ಲಿ ಹಳ್ಳಿಯ ಬಡ ಜನರೂ ಕೂಡ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಯಾಕೆ ಕಳಿಸುವುದಿಲ್ಲ ಎನ್ನುವ ಪ್ರಶ್ನೆಗೆ ನೂರಾರು ಕಾರಣಗಳು ಸಿಗುತ್ತವೆ. ಇಂತಹದೇ ಒಂದು ಪ್ರಶ್ನೆಗೆ ಆನೇಕಲ್​ ಶಾಲೆ ಉತ್ತರ ನೀಡುತ್ತೆ.

ದೊಡ್ಡ ದೊಡ್ಡದಾಗಿ ಬಿರುಕು ಬಿಟ್ಟಿರುವ ಗೋಡೆಗಳು, ದನದ ಕೊಟ್ಟಿಗೆಯಂತಿರುವ ಕೊಠಡಿಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ದೃಶ್ಯ ಕಂಡುಬಂದದ್ದು ಆನೇಕಲ್​ನ ಹೊನ್ನಕಳಸಾಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿ. ಈ ಹಳ್ಳಿಯಲ್ಲಿರುವ ಮಕ್ಕಳು ಸರ್ಕಾರಿ ಶಾಲೆಯನ್ನೇ ಅವಲಂಬಿಸಿದ್ದಾರೆ. 

ಈ ಬಿರುಕು ಬಿಟ್ಟಿರುವ ಗೋಡೆಗಳು ಯಾವಾಗ ಮಕ್ಕಳ ಮೇಲೆ ಬೀಳುತ್ತವೊ ಎಂಬ ಭಯದಿಂದ ಕೆಲವು ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆ ಬಿಡಿಸಿ ಆನೇಕಲ್'ನ ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ, ಇಲ್ಲಿನ ಅವ್ಯೆಸ್ಥೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರು ಹೊಸ ಕಟ್ಟಡದ ನಿರ್ಮಾಣಕ್ಕಾಗಲಿ ಕಟ್ಟಡದ ರಿಪೇರಿ ಮಾಡಿಸುವ ಗೋಜಿಗೆ ಹೋಗಿಲ್ಲ,

ವಿದ್ಯೆ ಕಲಿಯುವ ಆಸಕ್ತಿ ಮಕ್ಕಳಿಗಿದ್ದರೂ ಮೂಲ ಭೂತ ಸೌಕರ್ಯಗಳಿಲ್ಲದಿರುವುದು ಮಕ್ಕಳು ಪರದಾಡುವಂತಾಗಿದೆ, ಜೋರಾಗಿ ಮಳೆ ಬಂದರೆ ಮಕ್ಕಳಿಗೆ ರಜೆ ನೀಡಾಬೇಕಾದ ಸ್ಥಿತಿ ಉಂಟಾಗಿದೆ.