ಪತಂಜಲಿ ಆಯುರ್ವೇದ ಉತ್ಪನ್ನಗಳ ಮಾರಾಟ ಹೆಚ್ಚಿಸಲು, ಯೋಗ ಗುರು ಬಾಬಾ ರಾಮದೇವ್ ಈಗ ಸೋಶಿಯಲ್ ಮೀಡಿಯಾ ದಿಗ್ಗಜರಾದ ಫೇಸ್ಬುಕ್ ಹಾಗೂ ಗೂಗಲ್ ಕಂಪನಿಗಳೊಂದಿಗೆ ಸಹಯೋಗ ಮಾಡಿಕೊಳ್ಳುವುದಾಗಿ ಘೋಷಿಸಿದೆ.

ನವದೆಹಲಿ: ಪತಂಜಲಿ ಆಯುರ್ವೇದ ಉತ್ಪನ್ನಗಳ ಮಾರಾಟ ಹೆಚ್ಚಿಸಲು, ಯೋಗ ಗುರು ಬಾಬಾ ರಾಮದೇವ್ ಈಗ ಸೋಶಿಯಲ್ ಮೀಡಿಯಾ ದಿಗ್ಗಜರಾದ ಫೇಸ್ಬುಕ್ ಹಾಗೂ ಗೂಗಲ್ ಕಂಪನಿಗಳೊಂದಿಗೆ ಸಹಯೋಗ ಮಾಡಿಕೊಳ್ಳುವುದಾಗಿ ಘೋಷಿಸಿದೆ.

ಪತಂಜಲಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲು ಡಿಜಿಟಲ್ ಮಾರ್ಕೆಟಿಂಗ್’ಗೆ ರಾಮದೇವ್ ಮುಂದಾಗಿದ್ದು, ಸಾಫ್ಟ್’ವೇರ್ ದೈತ್ಯ ಗೂಗಲ್ ಹಾಗೂ ಸೋಶಿಯಲ್ ಮೀಡಿಯಾ ದಿಗ್ಗಜ ಫೇಸ್ಬುಕ್’ಗಳ ಸಹಯೋಗದೊಂದಿಗೆ ಜಾಹೀರಾತು ಅಭಿಯಾನಗಳನ್ನು ನಡೆಸುವುದಾಗಿ ಘೋಶಿಸಿದ್ದಾರೆ.

ಈವರೆಗೆ ಮುದ್ರಣ ಹಾಗೂ ಟಿವಿ ಮಾಧ್ಯಮಗಳಲ್ಲಿ ತಮ್ಮ ಉತ್ಪನ್ನಗಳ ಜಾಹೀರಾತು ನೀಡುತಿದ್ದ ಪತಂಜಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಮಾರ್ಕೆಟಿಂಗ್’ಗೆ ಕೈಹಾಕಿದೆ.

ಕಳೆದ ಫೆಬ್ರವರಿಯಲ್ಲಿ ಯೂಟ್ಯೂಬ್’ನಲ್ಲಿ ವಿಡಿಯೋಗಳ ಮೂಲಕ ತಮ್ಮ ಉತ್ಪನ್ನಗಳನ್ನು ಪ್ರಚುರಪಡಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆಯೆಂದು ಹೇಳಲಾಗಿದೆ. ಗೂಗಲ್ ಸರ್ಚ್ ನಲ್ಲಿ 11 ಪಟ್ಟು ಹೆಚ್ಚಳವಾಗಿದ್ದರೆ, ಯೂಟ್ಯೂಬ್’ನಲ್ಲಿ 30 ಲಕ್ಷವಿದ್ದ ವೀಕ್ಷಣೆಯ ಪ್ರಮಾಣ 15 ಕೋಟಿಗೇರಿದೆ.

ಗೂಗಲ್ ಹಾಗೂ ಫೇಸ್ಬುಕ್’ನಲ್ಲಿ ಪ್ರಾದೇಶಿಕ ಭಾಷೆಗಳ ಮೂಲಕ ದಕ್ಷಿಣ ಭಾರತೀಯ ರಾಜ್ಯಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ವಿದೇಶಿ ಉತ್ಪನ್ನಗಳನ್ನು ತ್ಯಜಿಸಿ, ಸ್ವದೇಶಿ ವಸ್ತುಗಳನ್ನು ಬಳಸಿ ಎಂದು ಬಾಬಾ ರಾಮದೇವ್ ಆನ್’ಲೈನ್ ಅಭಿಯಾನ ನಡೆಸುತ್ತಿದ್ದಾರೆ.