ಪಂಚ ರಾಜ್ಯಗಳ ಫಲಿತಾಂಶದ ನಂತರ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಧ್ರುವೀಕರಣ ನಿಧಾನವಾಗಿ ಆರಂಭವಾಗಿದೆ. ಎನ್‌ಡಿಎಯಿಂದ ದೂರವಾಗಿದ್ದ ಶಿವಸೇನೆ ಮತ್ತೆ ಹಳೆ ದೋಸ್ತಿ ಬೆಸೆಯುವ ಮಾತನ್ನಾಡುತ್ತಿದೆ. ಆದರೆ ಇನ್ನೊಂದು ಕಡೆ ಎನ್‌ಡಿಎ ಜತೆಗೆ ಇರುವ ಪ್ರಮುಖ ಪಕ್ಷ ವೊಂದು ದೂರ ಸರಿಯಲು ಸದ್ದಿಲ್ಲದೆ ಸಿದ್ಧತೆ ಮಾಡಿಕೊಂಡಿದೆ.
ನವದೆಹಲಿ[ಡಿ.20] ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎಗೆ ವಿರುದ್ಧವಾಗಿ ಸಂಘಟಿತವಾಗುತ್ತಿರುವ ಮಹಾಘಟಬಂಧನ್‌ಗೆ ಎನ್‌ಡಿಎ ಜತೆ ಇದ್ದ ಪಕ್ಷವೊಂದು ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.
ರಾಮ್ ವಿಲಾಸ್ ಅವರ ಲೋಕ ಜನಶಕ್ತಿ ಪಾರ್ಟಿ ಸಹ ಬಿಜೆಪಿಯೊಂದಿಗಿನ ಸಖ್ಯ ಕಡಿದುಕೊಳ್ಳುವ ಸಂದೇಶ ರವಾನಿಸಿದೆ. ರಾಷ್ಟ್ರೀಯ ಲೋಕ ಸಮತಾ ಪಾರ್ಟಿ[ಆರ್‌ಎಲ್ ಎಸ್‌ಪಿ] ಮುಖ್ಯಸ್ಥ ಉಪೇಂಧ್ರ ಖುಷ್ವಾಲಾ ಮಹಾಘಟಬಂಧನ್ ಜತೆ ಸೇರಲಿದ್ದಾರೆ. ಡಿಸೆಂಬರ್ 10 ರಂದು ಎನ್‌ಡಿಎ ಜತೆ ನಂಟು ಕಳೆದುಕೊಂಡಿರುವ ಆರ್‌ಎಲ್ ಎಸ್‌ಪಿ ಕಾಂಗ್ರೆಸ್ ಒಕ್ಕೂಟದ ಜತೆ ಹೋದರೆ ಬಿಜೆಪಿಗೆ ಬಿಹಾರದಲ್ಲಿ ಹಿನ್ನಡೆ ಆಗುವುದೆಂತೂ ಖಚಿತ.
ದೂರವಾಗಿರುವ ಹಳೆ ಸದೋಸ್ತಿ ಮತ್ತೆ ಬಿಜೆಪಿ ಜತೆಗೆ..ಕಂಡಿಶನ್ ಏನು?
ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಮಹಾಘಟಬಂಧನ್ ಜತೆ ಸೇರಿಕೊಳ್ಳುವ ಸಂಬಂಧ ಆರ್‌ಜೆಡಿ ಸಹ ಪ್ರತಿಕ್ರಿಯೆ ನೀಡಿದೆ. ಮಹಾ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿಯನ್ನು ಈಗಲೇ ಘೋಷಿಸಲು ಸಾಧ್ಯವಿಲ್ಲ ಎಂದು ಇನ್ನೊಂದು ಕಡೆ ಬಿಎಸ್‌ಪಿಯ ಮಾಯಾವತಿ ಹೇಳಿದ್ದಾರೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ಪಕ್ಷಗಳು ತಮ್ಮ ತಮ್ಮ ಸ್ಟಾಂಡ್ ತೆಗೆದುಕೊಳ್ಳುತ್ತಿವೆ.
