ಇನ್ನು ಮುಂದೆ ಪಾಸ್‌ಪೋರ್ಟ್‌ ಇಂಗ್ಲಿಷ್‌ನಲ್ಲಿ ಮಾತ್ರವಲ್ಲ, ಹಿಂದಿ ಮತ್ತು ಇಂಗ್ಲಿಷ್‌ ಎರಡರಲ್ಲೂ ಇರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.
ಎಂಟು ವರ್ಷಕ್ಕಿಂತ ಕೆಳಗಿನ ಮತ್ತು 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಪಾಸ್ಪೋರ್ಟ್ ಶುಲ್ಕದಲ್ಲಿ ಶೇ. 10ರಷ್ಟು ರಿಯಾಯತಿಯನ್ನೂ ಅವರು ಘೋಷಿಸಿದ್ದಾರೆ.
ವೈಯಕ್ತಿಕ ವಿವರಗಳನ್ನು ಈಗ ಇಂಗ್ಲಿಷ್ನಲ್ಲಿ ಮುದ್ರಿಸಲಾಗುತ್ತಿದೆ. ಪಾಸ್ಪೋರ್ಟ್ ಕಾಯ್ದೆ, 1967ಕ್ಕೆ 50 ವರ್ಷಗಳಾದ ಸ್ಮರಣಾರ್ಥ ನಡೆದ ಕಾರ್ಯ ಕ್ರಮದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡುತ್ತಾ ಈ ವಿಷಯ ತಿಳಿಸಿದರು.
