ವಿಮಾನ ವಿಳಂಬ, ರದ್ದತಿಗೆ ಪ್ರಯಾಣಿಕರಿಗೆ 20,000 ಪರಿಹಾರ?

First Published 20, Apr 2018, 1:32 PM IST
Passengers could be compensated up to Rs 20 000 for flight delays
Highlights

ಮುಂದಿನ ದಿನಗಳಲ್ಲಿ ವಿಮಾನದ ವಿಳಂಬ ಅಥವಾ ರದ್ದು ಅಥವಾ ಸರಿಯಾದ ಸೇವೆ ಇಲ್ಲದಿರುವಂಥ ಘಟನೆಗಳಿಂದಾಗಿ ನೀವು ಸಮಸ್ಯೆ ಎದುರಿಸಿದಲ್ಲಿ, ನೀವು 20 ಸಾವಿರ ರು.ವರೆಗಿನ ಪರಿಹಾರ ಪಡೆಯಲು ಅರ್ಹವಾಗಿರಲಿದ್ದೀರಿ.

ನವದೆಹಲಿ: ಮುಂದಿನ ದಿನಗಳಲ್ಲಿ ವಿಮಾನದ ವಿಳಂಬ ಅಥವಾ ರದ್ದು ಅಥವಾ ಸರಿಯಾದ ಸೇವೆ ಇಲ್ಲದಿರುವಂಥ ಘಟನೆಗಳಿಂದಾಗಿ ನೀವು ಸಮಸ್ಯೆ ಎದುರಿಸಿದಲ್ಲಿ, ನೀವು 20 ಸಾವಿರ ರು.ವರೆಗಿನ ಪರಿಹಾರ ಪಡೆಯಲು ಅರ್ಹವಾಗಿರಲಿದ್ದೀರಿ.

ಹೌದು, ಇಂಥ ಒಂದು ಕ್ರಮ ಜಾರಿಯ ಪ್ರಸ್ತಾಪನೆಗೆ ವಿಮಾನಯಾನ ಸಚಿವಾಲಯ ಮುಂದಾಗಿದೆ. ಆದರೆ,ಕೇಂದ್ರ ಸರ್ಕಾರದ ಈ ಪ್ರಸ್ತಾಪನೆಗೆ ವಿಮಾನಯಾನ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ.

ಇಡೀ ವಿಶ್ವದಲ್ಲಿ ಭಾರತದ ವಿಮಾನಗಳ ಪ್ರಯಾಣ ದರ ಕಡಿಮೆಯಿದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಜಾರಿಗೊಳಿಸಿದಲ್ಲಿ, ವಿಮಾನ ಪ್ರಯಾಣದ ದರ ಏರಿಕೆ ಮಾಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ವಿಮಾನದ ಕಂಪನಿಗಳು ಎಚ್ಚರಿಕೆ ರವಾನಿಸಿವೆ.

loader