ಟೇಕ್ ಆಫ್ ಆದ ವಿಮಾನದಲ್ಲಿ ಧೂಮಪಾನ ಮಾಡಲು ಮುಂದಾದ ಪ್ರಯಾಣಿಕ| ಪ್ರಯಾಣಿಕನನ್ನು ಮಾರ್ಗ ಮಧ್ಯೆಯೇ ಇಳಿಸಿ ಹೊರಟ ವಿಮಾನ| ಟಾಟಾ ಸನ್ಸ್ ಒಡೆತನದ ವಿಸ್ತಾರ ವಿಮಾನ ಸಂಸ್ಥೆ| ಅಮೃತಸರ-ದೆಹಲಿ-ಕೋಲ್ಕತ್ತಾ ನಡುವಿನ ವಿಮಾನದಲ್ಲಿ ಘಟನೆ| ವಿಮಾನವನ್ನು ವಾಪಸ್ ದೆಹಲಿಗೆ ಇಳಿಸಿ ಪ್ರಯಾಣಿಕನನ್ನು ಹೊರ ಹಾಕಿದ ಸಿಬ್ಬಂದಿ

ನವದೆಹಲಿ(ಡಿ.22): ಟೇಕ್ ಆಫ್ ಆದ ವಿಮಾನದಲ್ಲಿ ಧೂಮಪಾನ ಮಾಡಲು ಮುಂದಾದ ಪ್ರಯಾಣಿಕನನ್ನು, ಮಾರ್ಗಮಧ್ಯದಲ್ಲೇ ಟಾಟಾ ಸನ್ಸ್ ಒಡೆತನದ ವಿಸ್ತಾರ ವಿಮಾನ ಸಂಸ್ಥೆ ಕೆಳಗಿಳಿಸಿದ ಘಟನೆ ನಡೆದಿದೆ . 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೃತಸರ-ದೆಹಲಿ-ಕೋಲ್ಕತ್ತಾ (ಯುಕೆ 946-ಯುಕೆ 707) ವಿಮಾನದಲ್ಲಿ ಈ ಘಟನೆ ನಡೆದಿದ್ದು, ಎರಡು ಕಾರಣಗಳಿಂದಾಗಿ ವಿಮಾನ 1.5 ಗಂಟೆ ತಡವಾಗಿ ನಿಗದಿತ ಸ್ಥಳವನ್ನು ತಲುಪಿದೆ. 

ಮೊದಲನೆ ಘಟನೆಯಲ್ಲಿ ಕುಟುಂಬವೊಂದು ತುರ್ತು ಅಗತ್ಯವಿದ್ದ ಕಾರಣ ದೆಹಲಿಯಲ್ಲಿ ಇಳಿದಿದ್ದರೆ, ನಂತರ ಕೋಲ್ಕತ್ತಾಗೆ ತೆರಳಬೇಕಿದ್ದ ಪ್ರಯಾಣಿಕನೋರ್ವ ಧೂಮಪಾನ ಮಾಡುವುದಾಗಿ ಕ್ಯಾತೆ ತೆಗೆದು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾನೆ.

ಪ್ರಯಾಣಿಕನ ವರ್ತನೆಯಿಂದ ಬೇಸತ್ತ ಸಿಬ್ಬಂದಿ ಕೊನೆಗೆ ಮತ್ತೆ ದೆಹಲಿಯತ್ತ ವಿಮಾನ ತಿರುಗಿಸಿ ಆತನನ್ನು ಕೆಳಗಿಳಿಸಿದೆ.