ಬೆಂಗಳೂರು (ಸೆ.13): ಕಿಡ್ನಿ ಆಪರೇಷನ್'ಗೆ ಬೆಂಗಳೂರಿಗೆ ಬಂದ ಪ್ರಯಾಣಿಕನೊಬ್ಬ ಆಸ್ಪತ್ರೆಗೆ ಹೋಗಲು ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾನೆ.
ಮೂಲತಃ ರಾಯಚೂರಿನವರಾದ ಚಂದ್ರಶೇಖರ ರೆಡ್ಡಿ ನಿನ್ನೆ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದರು. ಆದರೆ ಆಪರೇಷನ್ ನಾಳೆ ಇರುವ ಕಾರಣ ತಮ್ಮ ಸ್ನೇಹಿತರ ಮನೆಯಲ್ಲಿ ತಂಗಿದ್ದರು. ಬೆಳಗ್ಗೆ ಆಸ್ಪತ್ರೆಯಿಂದ ಕರೆಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಹೋಗಲು ಮೆಜೆಸ್ಟಿಕ್ಗೆ ಬಂದ ಚಂದ್ರಶೇಖರ್ ಬಸ್ ಸಂಚಾರ ಇಲ್ಲದೆ ಕಣ್ಣೀರು ಹಾಕುತ್ತಿದ್ದಾರೆ.
ನಾಳೆ ಬೆಳಗ್ಗೆ 11ಗಂಟೆಗೆ ಆಪರೇಷನ್ ಇರುವುದರಿಂದ ಆಸ್ಪತ್ರೆಗೆ ಹೋಗಲು ಬಸ್ ಇಲ್ಲದೇ ಪರದಾಡುತ್ತಿದ್ದಾರೆ.
