‘ಇಂದಿನ ವರ್ಷಗಳಲ್ಲಿ ಚುನಾವಣಾ ಪ್ರಣಾಳಿಕೆಗಳು ಕೇವಲ ಕಾಗದದ ಹಾಳೆಗಳಾಗಿಯೇ ಉಳಿಯುತ್ತಿವೆ. ಅದಕ್ಕೆ ರಾಜಕೀಯ ಪಕ್ಷಗಳನ್ನು ಹೊಣೆಗಾರರನ್ನಾಗಿಸುವ ಅಗತ್ಯವಿದೆ’ ಎಂದು ನ್ಯಾ. ಖೆಹರ್ ಉಪನ್ಯಾಸವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಏ.08): ಚುನಾವಣೆ ಪೂರ್ವದಲ್ಲಿ ನೀಡುವ ಆಶ್ವಾಸನೆಗಳನ್ನು ರಾಜಕೀಯ ಪಕ್ಷಗಳು ಈಡೇರಿಸುವುದಿಲ್ಲ, ಹಾಗೂ ಪ್ರಣಾಳಿಕೆಗಳು ಕಾಗದದ ತುಂಡುಗಳಾಗಿಯೇ ಉಳಿದು ಹೋಗುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಜೆ,ಎಸ್.ಖೆಹರ್ ಹೇಳಿದ್ದಾರೆ.

‘ಇಂದಿನ ವರ್ಷಗಳಲ್ಲಿ ಚುನಾವಣಾ ಪ್ರಣಾಳಿಕೆಗಳು ಕೇವಲ ಕಾಗದದ ಹಾಳೆಗಳಾಗಿಯೇ ಉಳಿಯುತ್ತಿವೆ. ಅದಕ್ಕೆ ರಾಜಕೀಯ ಪಕ್ಷಗಳನ್ನು ಹೊಣೆಗಾರರನ್ನಾಗಿಸುವ ಅಗತ್ಯವಿದೆ’ ಎಂದು ನ್ಯಾ. ಖೆಹರ್ ಉಪನ್ಯಾಸವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಧಿಕಾರಕ್ಕೆ ಬಂದ ಬಳಿಕ ಆಶ್ವಾಸನೆಗಳನ್ನು ಈಡೇರಿಸದೇ ರಾಜಕೀಯ ಪಕ್ಷಗಳು ಕ್ಷುಲ್ಲಕ ಕಾರಣಗಳನ್ನು ಮುಂದಿಡುತ್ತವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಬಿಡಉಗಡೆಮಾಡಿರುವ ಪ್ರಣಾಳಿಕೆಗಳನ್ನು ವಿಮರ್ಶಿಸಿದ ನ್ಯಾ. ಖೆಹರ್, ಹಿಂದುಳಿದ ವರ್ಗಗಳಿಗೆ ಸಾಮಾಜೋ-ಆರ್ಥಿಕ ನ್ಯಾಯವೊದಗಿಸುವ ಸಾಂವಿಧಾನಿಕ ಧ್ಯೇಯ ಹಾಗೂ ಚುನಾವಣಾ ಸುಧಾರಣೆ ನಡುವೆ ಯಾವ ಪ್ರಣಾಳಿಕೆಯಲ್ಲೂ ಪ್ರಸ್ತುತತೆ ಕಂಡು ಬಂದಿಲ್ಲವೆಂದು ಹೇಳಿದ್ದಾರೆ.