ಬೆಳಗಾವಿ ಪಾಲಿಕೆಯಲ್ಲಿ 58 ಸದಸ್ಯರು ಮತ್ತು ಮೂವರು ಶಾಸಕರು, ಇಬ್ಬರು ಸಂಸದರು ಸೇರಿ ಐದು ಜನ ಜನಪ್ರತಿನಿಧಿಗಳಿಗೆ ಮತದಾನದ ಹಕ್ಕಿದೆ.

ಬೆಳಗಾವಿ (ಫೆ.26): ಬೆಳಗಾವಿ ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್‌ ಚುನಾವಣೆ ಇದೇ ಮಾರ್ಚ್‌ 1ರಂದು ನಡೆಯಲಿದ್ದು ಮೇಯರ್‌, ಉಪ ಮೇಯರ್‌ ಗದ್ದುಗೆ ಏರಲು ಎಂಇಎಸ್‌ ಮತ್ತು ಕನ್ನಡ ಪಾಳ್ಯದಲ್ಲಿ ರಾಜಕೀಯ ಚಟುವಟಿಕೆ ಚುರುಕಗೊಂಡಿದೆ.

ಬೆಳಗಾವಿ ಪಾಲಿಕೆಯಲ್ಲಿ 58 ಸದಸ್ಯರು ಮತ್ತು ಮೂವರು ಶಾಸಕರು, ಇಬ್ಬರು ಸಂಸದರು ಸೇರಿ ಐದು ಜನ ಜನಪ್ರತಿನಿಧಿಗಳಿಗೆ ಮತದಾನದ ಹಕ್ಕಿದೆ. ಹೀಗಾಗಿ ಈ ಬಾರಿ ಕನ್ನಡದವರನ್ನೇ ಮೇಯರ್‌, ಉಪ ಮೇಯರ್‌ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ , ಅವರ ಸಹೋದರ ಲಖನ್‌ ಜಾರಕಿಹೊಳಿ ಬಣ ಮತ್ತು ಅತ್ತ ಮಾಜಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಫಿರೋಜ್‌ ಸೇಠ್‌ ನೇತೃತ್ವದ ಬಣವು ರಣತಂತ್ರ ರೂಪಿಸುತ್ತಿದೆ.

ಇಂದು ಶಾಸಕ ಸೇಠ್‌ ಮನೆಯಲ್ಲಿ ಸತೀಶ ಜಾರಕಿಹೊಳಿ ತಮ್ಮ ಆಪ್ತ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿ, ಮೊದಲ ಸುತ್ತಿನ ಚರ್ಚೆ ನಡೆಸಿದರು.