ಮೋಡ ಜಾಸ್ತಿ ಇರುವ ಹಿನ್ನಲೆ ಚಂದ್ರ ಕಣ್ಣಿಗೆ ಕಾಣಿಸೋದಿಲ್ಲ. ಆದ್ರೆ ಬರಿಗಣ್ಣಿಂದ ಚಂದ್ರನನ್ನು ನೋಡಿದ್ರೆ ಯಾವುದೇ ಸಮಸ್ಯೆ ಉಂಟಾಗೋದಿಲ್ಲ
ಬೆಂಗಳೂರು(ಆ.06): ಆಗಸ್ಟ್ 7ರ ರಾತ್ರಿ ಭಾರತದಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ಹೌದು ರಾತ್ರಿ ಗೋಚರಿಸಲಿರುವ ಚಂದ್ರಗ್ರಹಣ ಮುಂಜಾನೆವರೆಗೆ ಮುಂದುವರಿಯಲಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸಲಿದ್ದು, ಯುರೋಪ್, ಏಷ್ಯಾ, ದಕ್ಷಿಣ ಆಫ್ರಿಕಾಗಳಲ್ಲಿ ಕಾಣಿಸಲಿದೆ.
ಚಂದ್ರಗ್ರಹಣ 7ರ ರಾತ್ರಿ 10.50ಕ್ಕೆ ಗ್ರಹಣ ಆರಂಭವಾಗಲಿದ್ದು, ಗರಿಷ್ಠ ಪ್ರಮಾಣ 11.50ಕ್ಕೆ ಆಗಲಿದೆ. 12.48ಕ್ಕೆ ಗ್ರಹಣ ಕೊನೆಯಾಗಲಿದೆ. ಆದರೆ ಇದು ಪೂರ್ಣ ಗ್ರಹಣವಲ್ಲ. ಚಂದ್ರನ ಕೆಳಗಿನ ಸ್ವಲ್ಪ ಭಾಗದಲ್ಲಿ ಮಾತ್ರ ಭೂಮಿಯ ಕರಿನೆರಳು ಬಿದ್ದಿರುತ್ತೆ ಹೀಗಾಗಿ ಪಾರ್ಶ್ವ ಗ್ರಹಣ.ಮೋಡ ಜಾಸ್ತಿ ಇರುವ ಹಿನ್ನಲೆ ಚಂದ್ರ ಕಣ್ಣಿಗೆ ಕಾಣಿಸೋದಿಲ್ಲ. ಆದ್ರೆ ಬರಿಗಣ್ಣಿಂದ ಚಂದ್ರನನ್ನು ನೋಡಿದ್ರೆ ಯಾವುದೇ ಸಮಸ್ಯೆ ಉಂಟಾಗೋದಿಲ್ಲ ಅಂತಾರೆ ನೆಹರೂ ತಾರಾಲಯದ ನಿರ್ದೇಶಕರು.
ಈ ಗ್ರಹಣ ಭಾರತದಲ್ಲಿ ಗೋಚರಿಸಲಿದೆ. ಅಲ್ಲದೆ ಯುರೋಪ್, ಏಷ್ಯಾ, ದಕ್ಷಿಣ ಆಫ್ರಿಕಾಗಳಲ್ಲಿ ಕಾಣಿಸಲಿದೆ. ಚಂದ್ರನನ್ನು ನೋಡುವುದರಿಂದ ಗರ್ಭಿಣಿಯರು ಸೇರಿದಂತೆ ಯಾರಿಗೂ ವೈಜ್ಞಾನಿಕವಾಗಿ ಸಮಸ್ಯೆ ಆಗೋದಿಲ್ಲ. ಇನ್ನು ನೆಹರೂ ತಾರಾಲಯದಲ್ಲಿ ಟೆಲಿಸ್ಕೋಪ್ ಮೂಲಕ ಚಂದ್ರನ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಮೋಡ ಕವಿದಿದ್ದಲ್ಲಿ ಚಂದ್ರನ ವೀಕ್ಷಣೆ ಕಷ್ಟ. ಇಲ್ಲದಿದ್ದಲ್ಲಿ ಜನ ಬರಿಗಣ್ಣಲ್ಲೂ ಚಂದ್ರನ ವೀಕ್ಷಣೆ ಮಾಡಬಹುದು ಹಾಗೂ ತಾರಾಲಯದಲ್ಲೂ ವೀಕ್ಷಣೆಗೆ ಅವಕಾಶವಿದೆ.
