ಬೆಂಗಳೂರು(ನ.29): ಕೇಂದ್ರ ಸರ್ಕಾರ ಐನೂರು, ಸಾವಿರ ನೋಟುಗಳನ್ನು ನಿಷೇಧ ಮಾಡಿದ ನಂತರ ಬ್ಲಾಕ್​ ಅಂಡ್​ ವೈಟ್ ಮನಿ​ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಇಂತಹ ದಂಧೆಕೋರರ ಬೆನ್ನುಬಿದ್ದಿರುವ ಸುವರ್ಣ ನ್ಯೂಸ್​ ಈಗಾಗಲೇ ಹಲವು ದಂಧೆಕೋರನ್ನು ಬಯಲಿಗಿಟ್ಟಿದೆ. ಇದೀಗ ಹೋಟೆಲ್​'ವೊಂದರಲ್ಲಿ  ರಹಸ್ಯ ಕ್ಯಾಮರಾ ಮೂಲಕ ದಂಧೆಕೋರರನ್ನು ಖೆಡ್ಡಾಗೆ ಬೀಳಿಸಿದೆ.

ಮತ್ತೊಂದು ಬ್ಲ್ಯಾಕ್ ಅಂಡ್ ವೈಟ್ ಮನಿ ದಂಧೆ ಬಯಲು: ದಂಧೆಕೋರರನ್ನು ಖೆಡ್ಡಾಗೆ ಬೀಳಿಸಿದೆ ಸುವರ್ಣನ್ಯೂಸ್

ಬ್ಲ್ಯಾಕ್ ಅಂಡ್ ವೈಟ್ ಮನಿ ದಂಧೆ ಬೆನ್ನು ಹತ್ತಿರುವ ಸುವರ್ಣ ನ್ಯೂಸ್ ಈಗಾಗಲೇ ಹಲವರ ಬಣ್ಣ ಬಯಲು ಮಾಡಿದೆ. ಕೆಲವರು ಅರೆಸ್ಟ್​ ಕೂಡಾ ಆಗಿದ್ದಾರೆ. ಇದೀಗ ಮತ್ತೊಂದು ದಂಧೆಯನ್ನು ಸುವರ್ಣನ್ಯೂಸ್ ಖೆಡ್ಡಾಗೆ ಬೀಳಿಸಿದೆ. ಅವ್ಯವಹಾರದ ಬೆನ್ನು ಹತ್ತಿದ ಸುವರ್ಣ ನ್ಯೂಸ್ ತಂಡಕ್ಕೆ  ಜಯನಗರದ ಬ್ರೋಕರ್​ ತಂಡ ಈ ದಂಧೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ದೊರಕಿತ್ತಿ. ದಂಧೆ  ಬೆನ್ನತ್ತಿದ ನಮ್ಮ ಪ್ರತಿನಿಧಿಗಳು ವ್ಯವಹಾರಕ್ಕೆ ಮುಂದಾದಾಗ ಸಿಕ್ಕವರು 40 ಪರ್ಸೆಂಟ್'​ಗೆ ಹಳೇ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ನೀಡುತ್ತಿದ್ದ ವಂಚಕರ ಪಡೆ.

ಜಯನಗರದ ಕಾಳಧನಿಕನೊಬ್ಬನಿಂದ ಹಣ ಪಡೆದಿದ್ದ ಬ್ರೋಕರ್'​ಗಳು ವುಡ್​ ಲ್ಯಾಂಡ್​ ಹೋಟೆಲ್​ ಆವರಣದಲ್ಲಿ ನಮ್ಮೊಂದಿಗೆ ವ್ಯವಹಾರಕ್ಕೆ ನಿಂತರು.  ಈ ಬ್ರೋಕರ್​'ಗಳು ಮಾತನಾಡುವುದು ಬರೀ ಕೋಟಿಗಳ ಲೆಕ್ಕದಲ್ಲಿ. ಕೌಂಟಿಂಗ್​ ಮಷೀನ್​ ಇಲ್ಲದೇ ವ್ಯವಹಾರ ಸಾಧ್ಯವಿಲ್ಲ ಎಂದಿದ್ದಕ್ಕೆ ನಮ್ಮ ತಂಡ ಅದನ್ನು ತೆಗೆದುಕೊಂಡು ಹೋಗಿ ಅಖಾಡ ಸಿದ್ಧ ಮಾಡಿತ್ತು.

 

ಸುವರ್ಣ ನ್ಯೂಸ್​: ನೀವು ಕೌಂಟಿಂಗ್​ ಮಷಿನ್​ ಇಲ್ಲಾ ಅಂದ್ರಲ್ಲ,ಮತ್ತೆ ಹೋಗಿ ಕೌಂಟಿಂಗ್​ ಮಷಿನ್​ ತಂದೆವು.

ಬ್ರೋಕರ್​: ಯಾಕಂದ್ರೆ ಡೌಟ್ಸ್​ ಇರುತ್ತವೆ. ಡೌಟ್ಸ್​ ನಿಮಗೆ  ಕ್ಲಿಯರ್​ ಆಗ್ಬಿಡ್ಬೇಕು. ಒಂದ್ ಸಾರಿ  ನಾವ್​ ವ್ಯವಹಾರ ಮಾಡಿದ್ಮೇಲೆ ನೆಕ್ಸ್ಟ್ ನೀವ್​ ಬಂದಾಗ ನಮ್​ ಬಗ್ಗೆ ನಂಬಿಕೆ ಇರಬೇಕು.

ಸುವರ್ಣ ನ್ಯೂಸ್​: ಯಾಕಂದ್ರೆ ಫಸ್ಟ್​ ಟೈಂ ಎಲ್ಲಾರಿ ಭಯ ಇರತ್ತೆ. ಬೆಳಗ್ಗೆಯಿಂದ ತಲೆ ಕೆಟ್ಟೋಗಿದೆ. ನಾವ್​ ಬೇಡ ಅಂತ ಅಂದ್ವಿ. ವ್ಯವಹಾರ ಎಲ್ಲ ನಂಬಿಕೆ ಮೇಲೆನೇ ನಂಬಿದವರನ್ನೇ ಮೋಸ ಮಾಡುವುದು. ಕ್ಲಿಯರ್​ ಕಟ್​ ವ್ಯವಹಾರ ಇರ್ಲಿ.

ಬ್ರೋಕರ್​: ಅದು ಬಿಟ್ಬಿಡಿ, ಈಗ ನಮ್ಗೇನಿಲ್ಲ. ಅಮೌಂಟ್​ ತೋರಿಸಿ ಫಾರ್ ಎಕ್ಸಾಂಪಲ್​ 10 ಕೋಟಿ ಇದ್ದರೆ ತೋರಿ. ವಿತ್​ ಇನ್​ 10 ಮಿನಿಟ್ಸ್​ ನಲ್ಲಿ ನಾನ್​ ಅಮೌಂಟ್​ ತರಿಸ್ತೀನಿ.

ಸುವರ್ಣ ನ್ಯೂಸ್​: ಫಸ್ಟ್​ ಟ್ರಾನ್ಸಾಕ್ಷನ್​ ಅಷ್ಟೊಂದ್​ ಇಲ್ಲ. 10 ಕೋಟಿ ಇಲ್ಲೆಲ್ಲಿ ಕೌಂಟ್​ ಮಾಡ್ತೀರಾ?

ಬ್ರೋಕರ್​: ಫಾರ್​ ಎಕ್ಸಾಂಪಲ್​. ನಿಮ್ಮತ್ರ ಇವಾಗ 60 ಲಕ್ಷ ಇದೆ. ಓನ್ಲಿ 10 ಮಾಡಿ ಸಾಕು. ನಂಬಿಕೆ ಬರಬೇಕೆಂದರೆ ಮೊದಲು 10 ಲಕ್ಷ ಮಾಡಿ.

ಸುವರ್ಣ ನ್ಯೂಸ್​: ಈಗ ಎಷ್ಟು ತಂದಿದ್ದೀರಾ ನೀವು?

ಬ್ರೋಕರ್​: ಈಗ ನೀವೆಷ್ಟು ತೋರಿಸುತ್ತೀರೋ. 30 ಕೊಟ್ಟರೆ 30 ತೋರಿಸುತ್ತೇನೆ.  25 ಆದರೆ 25 ತೋರಿಸುತ್ತೇನೆ. ಫೈವ್​ ಮಿನಿಟ್ಸ್​ ಅಷ್ಟೇ ತರಿಸ್ತೀನಿ.

 

ಕೋಟಿಗಟ್ಟಲೆ ವ್ಯವಹಾರ ಮಾಡ್ತೀವಿ ಎಂದ ಈ ಬ್ರೋಕರ್​ ಕೊನೆಗೆ ಈಗ ಐವತ್ತು ಲಕ್ಷಕ್ಕೆ ರೆಡಿ ಇದೀವಿ. 40 ಪರ್ಸೆಂಟ್​ ರೀತಿ ಬದಲಾವಣೆ ಮಾಡಿಕೊಳ್ಳೋಣ ಎನ್ನುವ ಒಪ್ಪಂದಕ್ಕೆ ಬಂದರು. ಈ ದಂಧೆಕೋರರನ್ನು ಬಿಡಲೇಬಾರದೆಂದು ನಿರ್ಧರಿಸಿದ ನಮ್ಮ ತಂಡ ವುಡ್​ಲ್ಯಾಂಡ್​​ ಹೋಟೆಲ್​ನಲ್ಲಿ ಒಂದು ರೂಮ್​ ಕೂಡಾ ಮಾಡಿತ್ತು.

 

ಬ್ರೋಕರ್​: ನಿಮ್ದು ಅಮೌಂಟ್​ ಇಷ್ಟಿದೆ ಅಂತ ಹೇಳಿದರೆ ಅಷ್ಟು ನಾನ್​ ತರಲು ರೆಡಿ.

ಸುವರ್ಣ ನ್ಯೂಸ್​: ನಮ್ದು ಆಲ್​ ರೆಡಿ ಒಳಗಡೆ ಪಾರ್ಕಿಂಗ್​'ನಲ್ಲಿದೆ.

ಬ್ರೋಕರ್​: ನಮ್ದು ಅಷ್ಟೆನೇ ಇಲ್ಲೇ ಇದೆ ಹೊರಗಡೆ ಸ್ಕೂಟರ್​ ನಲ್ಲಿದೆ. ನೀವ್​ ಫೋನ್​ ಮಾಡಿದ್ರೆ ಟಕ್​ ಅಂತ ಬರ್ತದೆ. ಇಲ್ಲಿ ಇಷ್ಟು ಅಮೌಂಟ್​ ಇದೆ ಅಂತಂದ್ರೆ ಅಷ್ಟು ಅಮೌಂಟ್​ ತೊರಿಸೋಕೆ ನಾನ್​ ರೆಡಿ ಇದೀನಿ.

ಸುವರ್ಣ ನ್ಯೂಸ್​: ನಾವ್​ ಐವತ್ತು ತಂದಿದ್ದೀವಿ ನಾವು. ಕೌಂಟಿಂಗ್​ ಮಷೀನ್​ ರೆಡಿ ಇದೆ.

ಬ್ರೋಕರ್​: 50 ಲಕ್ಷ ರೆಡಿ ಇದಿಯಾ?

ಸುವರ್ಣ ನ್ಯೂಸ್​: ಹೌದು.. ಕೌಂಟಿಂಗ್​ ಮಷೀನ್​ ಮತ್ತೆ 50 ಲಕ್ಷ ರೆಡಿ ಇದೆ

ಸುವರ್ಣ ನ್ಯೂಸ್: ಏನ್​ ಮಾಡ್ತೀರೋ ಒಂದೇ ಸರಿ ಮಾಡಿ. ನಾವು ತುಂಬಾ ಹೊತ್ತು ಇಲ್ಲಿರೋಕಾಗಲ್ಲ..

ಬ್ರೋಕರ್​: ಒಂದೇ ಸರಿ, ಈಗ 60ಲಕ್ಷ ಇದೆ. 60 ಮಾಡಿ ಹೊರಡ್ತೀವಿ

ಸುವರ್ಣ ನ್ಯೂಸ್​: ನಾನೇನ್​ ಹೇಳೋದು. ಮತ್ತೆ ಮತ್ತೆ ಹೋಗೋದು ಬರೋದು ಬೇಡ. ನಾಳೆದು ನಾಳೆ ನೋಡೋಣ. ಹತ್​ ಮಾಡ್ತೀರೋ, ಐವತ್​ ಮಾಡ್ತೀರೋ ನಮಗೆ ಬೇಡ

ಬ್ರೋಕರ್​: 60 ಲಕ್ಷ ಕಂಪ್ಲೀಟ್​ ಆಗಿದೆ. 60 ರೆಡಿ ಇಟ್ಕೊಳಿ ಬಂದ್ಬಿಡ್ತೀವಿ.

ಸುವರ್ಣ ನ್ಯೂಸ್​: ನಾವ್​ ರೂಂ ಮಾಡೋ ಅವಶ್ಯಕತೆ ಇರ್ಲಿಲ್ಲ. ನೀವ್​ ಹೇಳಿದ್ದಕ್ಕೆ ರೂಮ್​ ಮಾಡಿರೋದು.

ಬ್ರೋಕರ್​: ನಿಮ್ಗು ಈಸಿಯಾಗುತ್ತೆ, ನಮ್ಗು ಈಸಿಯಾಗುತ್ತೆ

 

ಬ್ಲಾಕ್​ ಅಂಡ್​ ವೈಟ್​ನ ವ್ಯವಹಾರವನ್ನ ರಹಸ್ಯ ಕ್ಯಾಮರಾದಲ್ಲಿ ಸೆರೆ ಹಿಡಿದ ನಮ್ಮ ಪ್ರತಿನಿಧಿಗಳು ಈ ದಂಧೆಕೋರರನ್ನ ಸುಮ್ಮನೆ ಬಿಡಲಿಲ್ಲ. ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದವರಿಗೆ ಮುಂದೇನಾಯ್ತು ಅಂತ ತಿಳ್ಕೊಳ್ಬೇಕು ನೋಡ್ತಾ ಇರಿ ಸುವರ್ಣ ನ್ಯೂಸ್