ಕಳೆದ 29 ವರ್ಷಗಳಲ್ಲಿ ಮೊದಲ ಬಾರಿಗೆ ಸೇನೆಗೆ ತನ್ನ ಶಕ್ತಿಯ ಅರಿವಾಗುವಂತೆ ಪ್ರಧಾನಿ ಮೋದಿ ಮಾಡಿದ್ದಾರೆಂಬ ಪರ್ರಿಕರ್ ಹೇಳಿಕೆಯು, ಸೇನೆಗೆ ಹಾಗೂ ಯೋಧರ ತ್ಯಾಗ-ಬಲಿದಾನಗಳಿಗೆ ಮಾಡಿರುವ ದೊಡ್ಡ ಅವಮಾನವಾಗಿದೆ ಎಂದು ಆನಂದ್ ಶರ್ಮಾ ಕಿಡಿಕಾರಿದ್ದಾರೆ.
ನವದೆಹಲಿ (ಅ.13): ಸರ್ಜಿಕಲ್ ದಾಳಿಯ ಕುರಿತು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಕಡುವಾಗಿ ಟೀಕಿಸಿದೆ.
ಸರ್ಜಿಕಲ್ ದಾಳಿ ಬಗ್ಗೆ ಬಿಜೆಪಿ ನಾಯಕರು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಎಂದಿರುವ ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ, ಪ್ರಧಾನಿ ನರೇಂದ್ರ ಮೋದಿ, ಸಂಪುಟ ಸಹೋದ್ಯೋಗಿಗಳಿಗೆ ಎಚ್ಚರಿಸಿದ ಬಳಿಕವೂ ಸರ್ಜಿಕಲ್ ದಾಳಿಯ ಲಾಭವನ್ನು ಪಡೆಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೊದಿ, ಬಿಜೆಪಿ ಅಧ್ಯಕ್ಷ ಹಾಗೂ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಬೇರೆ ಬೇರೆ ರೀಯಲ್ಲಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಹೇಳಿರುವುದರ ವಿರುದ್ಧವಾಗಿ ಅವರ ಸಹೋದ್ಯೋಗಿಗಳು ನಡೆದುಕೊಳ್ಳುತ್ತಿದ್ದಾರೆ, ಎಂದು ಆನಂದ್ ಶರ್ಮಾ ಹೇಳಿದ್ದಾರೆ.
ಕಳೆದ 29 ವರ್ಷಗಳಲ್ಲಿ ಮೊದಲ ಬಾರಿಗೆ ಸೇನೆಗೆ ತನ್ನ ಶಕ್ತಿಯ ಅರಿವಾಗುವಂತೆ ಪ್ರಧಾನಿ ಮೋದಿ ಮಾಡಿದ್ದಾರೆಂಬ ಪರ್ರಿಕರ್ ಹೇಳಿಕೆಯು, ಸೇನೆಗೆ ಹಾಗೂ ಯೋಧರ ತ್ಯಾಗ-ಬಲಿದಾನಗಳಿಗೆ ಮಾಡಿರುವ ದೊಡ್ಡ ಅವಮಾನವಾಗಿದೆ ಎಂದು ಆನಂದ್ ಶರ್ಮಾ ಕಿಡಿಕಾರಿದ್ದಾರೆ.
ಸರ್ಜಿಕಲ್ ದಾಳಿಯ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಜೊತೆಹಂಚಿಕೊಳ್ಳಲು ಇಚ್ಚಿಸುತ್ತೇನೆ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ನಿನ್ನೆ ಹೇಳಿಕೆ ನೀಡಿದ್ದರು..
ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ಬಹುಪಾಲು ಯಶಸ್ಸು ಮೋದಿಗೆ ಸಲ್ಲಬೇಕು.ಇಂತದ್ದೊಂದು ಪ್ರಮುಖ ನಿರ್ಧಾರ ತೆಗೆದುಕೊಂಡ ಪ್ರಧಾನಿಯವರ ನಡೆ ಶ್ಲಾಘನೀಯ. ಜನರು ಕೂಡಾಸಂತುಷ್ಟರಾಗಿದ್ದಾರೆ. ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವವರು ಸಹ ಈ ಯಶಸ್ಸನ್ನುಮೋದಿ ಜೊತೆ ಹಂಚಿಕೊಳ್ಳಬಹುದು ಎಂದು ಪರ್ರಿಕರ್ ಕುಟುಕಿದ್ದರು.
