ಮುಂದಿನ ವರ್ಷದ ಆಗಸ್ಟ್-ಸೆಪ್ಟಂಬರ್ ವೇಳೆಗೆ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ತೆಲಂಗಾಣ ಬಿಜೆಪಿ ನಾಯಕ ಕೃಷ್ಣ ಸಾಗರ್ ರಾವ್ ತಿಳಿಸಿದ್ದಾರೆ. ಇದೊಂದು ಪಕ್ಷದ ಅಧಿಕೃತ ಅಭಿಪ್ರಾಯ ಅಲ್ಲ ಎಂದು ರಾವ್ ಸ್ಪಷ್ಟಪಡಿಸಿದ್ದಾರೆ.

ಹೈದರಾಬಾದ್ (ಡಿ.14): ಸಂಸತ್ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಅಜೆಂಡಾ ತಮ್ಮ ಪಕ್ಷದಲ್ಲಿರುವುದರಿಂದ, ಮುಂದಿನ ವರ್ಷದ ಆಗಸ್ಟ್-ಸೆಪ್ಟಂಬರ್ ವೇಳೆಗೆ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ.

2019ರಲ್ಲಿ ನಡೆಯಬೇಕಾಗಿರುವ ಲೋಕಸಭಾ ಚುನಾವಣೆಯಲ್ಲಿ 2018ರಲ್ಲೇ ನಡೆಸುವ ಸಾಧ್ಯತೆಯಿದೆ ಎಂದು ತೆಲಂಗಾಣ ಬಿಜೆಪಿ ನಾಯಕ, ವಕ್ತಾರ ಕೃಷ್ಣ ಸಾಗರ್ ರಾವ್ ತಿಳಿಸಿದ್ದಾರೆ. ಆದರೆ ಇದೊಂದು ಪಕ್ಷದ ಅಧಿಕೃತ ಅಭಿಪ್ರಾಯ ಅಲ್ಲ, ಓರ್ವ ವಿಶ್ಲೇಷಕನಾಗಿ ಇದನ್ನು ನಿರೀಕ್ಷಿಸುತ್ತಿದ್ದೇನೆ ಎಂದು ರಾವ್ ಸ್ಪಷ್ಟಪಡಿಸಿದ್ದಾರೆ.