ನೋಟು ಅಮಾನ್ಯ ಪ್ರಶ್ನೆಗಳಿಗೆ ಆರ್'ಬಿಐ ಗವರ್ನರ್ ಬಳಿ ಉತ್ತರವಿಲ್ಲ: ಸಂಸದೀಯ ಸಮಿತಿ ಟೀಕೆ
ನೋಟು ಅಮಾನ್ಯ ಕ್ರಮದ ಬಳಿಕ ಎಷ್ಟು ಹಣ ಬ್ಯಾಂಕುಗಳಿಗೆ ವಾಪಸು ಬಂದಿದೆಯೆಂದು ತಿಳಿಸಲು ರಿಸರ್ವ್ ಬ್ಯಾಂಕ್ ಗವರ್ನರ್ ವಿಫಲರಾಗಿದ್ದಾರೆ, ಎಂದು ಹಣಕಾಸು ಸ್ಥಾಯಿ ಸಮಿತಿಯ ಸುಗಾತ ರಾಯ್ ಹೇಳಿದ್ದಾರೆ.
ನವದೆಹಲಿ (ಜ.18): ತಾನು ಕೇಳಿರುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಸ್ಪಷ್ಟೀಕರಣ ನೀಡಲು ವಿಫಲರಾಗಿದ್ದಾರೆ ಎಂದು ಸಂಸದೀಯ ಸಮಿತಿಯು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಟೀಕಿಸಿದೆ.
ನೋಟು ಅಮಾನ್ಯ ಕ್ರಮದ ಬಳಿಕ ಎಷ್ಟು ಹಣ ಬ್ಯಾಂಕುಗಳಿಗೆ ವಾಪಸು ಬಂದಿದೆಯೆಂದು ತಿಳಿಸಲು ರಿಸರ್ವ್ ಬ್ಯಾಂಕ್ ಗವರ್ನರ್ ವಿಫಲರಾಗಿದ್ದಾರೆ, ಎಂದು ಹಣಕಾಸು ಸ್ಥಾಯಿ ಸಮಿತಿಯ ಸುಗಾತ ರಾಯ್ ಹೇಳಿದ್ದಾರೆ.
ಆದರೆ 9.2 ಲಕ್ಷ ಕೋಟಿ ರೂ.ಗಳನ್ನು ಮಾರುಕಟ್ಟೆಗೆ ಬಿಡಲಾಗಿದೆಯೆಂದು ಆರ್’ಬಿಐ ಗವರ್ನರ್ ತಿಳಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಸಂಸದ ವೀರಪ್ಪ ಮೊಯ್ಲಿ ಅಧ್ಯಕ್ಷರಾಗಿರುವ ಸ್ಥಾಯಿ ಸಮಿತಿಯ ಸಭೆಯಲ್ಲಿ, ಊರ್ಜಿತ್ ಪಟೇಲ್ ಅಲ್ಲದೇ, ಆರ್ಥಿಕ ವ್ಯವಹಾರ ಇಲಾಖೆ, ಹಣಕಾಸು ಇಲಾಖೆ ಹಾಗೂ ಕಂದಾಯ ಇಲಾಖೆಯ ಪ್ರತಿನಿಧಿಗಳು ಕೂಡಾ ಭಾಗವಹಿಸಿದ್ದರು.
ಭಾರತೀಯ ಬ್ಯಾಂಕುಗಳ ಸಂಘ (ಐಬಿಏ), ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್’ನ ಪ್ರತಿನಿಧಿಗಳು ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು.