ನವದೆಹಲಿ[ಜೂ.18]: ಈಗಷ್ಟೇ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಹ್ಲಾದ ಜೋಶಿ ಶುದ್ಧ ಹಿಂದಿ ಕಲಿಕೆ ಶುರುಮಾಡಿದ್ದಾರೆ. ದಿನವೂ ಹಿಂದಿ ಪತ್ರಿಕೆ ಓದುತ್ತಿರುವ ಜೋಶಿ ಹಿಂದಿ ಮಾತನಾಡುವ ಪ್ರಾಕ್ಟೀಸ್‌ ಕೂಡ ಮಾಡುತ್ತಿದ್ದಾರಂತೆ. ದಿಲ್ಲಿಯಲ್ಲಿದ್ದು ಪಾರ್ಲಿಮೆಂಟ್‌ ನಡೆಸಬೇಕೆಂದರೆ ಹಿಂದಿ ಕಲಿಯೋದು ಅನಿವಾರ್ಯ.

ಬೆಂಗಳೂರಿನಲ್ಲಿ ಕುಳಿತು ಹಿಂದಿ ಹೇರಿಕೆ ಎಂದೆಲ್ಲ ಜೋರಾಗಿ ಮಾತನಾಡಿದರೂ ದಿಲ್ಲಿಗೆ ಕೆಲಸಕ್ಕೆ ಬರುವ ರಾಜಕಾರಣಿ, ಅಧಿಕಾರಿ, ಪತ್ರಕರ್ತ, ಸಾಮಾನ್ಯ ಕೆಲಸಗಾರ ಎಲ್ಲರಿಗೂ ಮೊದಲು ಅನ್ನಿಸುವುದೇ ಅಯ್ಯೋ ಸ್ವಲ್ಪ ಹಿಂದಿ ಚೆನ್ನಾಗಿದ್ದಿದ್ದರೆ ಎಂದು. ಸಂಸತ್‌ ಪ್ರವೇಶಿಸುವ ಸಂಸದರು, ಮಂತ್ರಿಗಳಿಗೆ ಕನ್ನಡ, ಇಂಗ್ಲಿಷ್‌ ಗೊತ್ತಿದ್ದರೂ ಸ್ವಲ್ಪ ಗಮನ ಸೆಳೆಯಬೇಕಾದರೆ ಶುದ್ಧ ಉರ್ದು ಅಥವಾ ಸಂಸ್ಕೃತ ಮಿಶ್ರಿತ ಹಿಂದಿ ಬರಲೇಬೇಕು. ಇಲ್ಲವಾದರೆ ದಿಲ್ಲಿಯಲ್ಲಿ 20 ವರ್ಷ ಇದ್ದರೂ ಆತ ಬೆಳೆಯುವುದು ಕಷ್ಟ. 

ಈಗಷ್ಟೇ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಹ್ಲಾದ ಜೋಶಿ ಶುದ್ಧ ಹಿಂದಿ ಕಲಿಕೆ ಶುರುಮಾಡಿದ್ದಾರೆ. ದಿನವೂ ಹಿಂದಿ ಪತ್ರಿಕೆ ಓದುತ್ತಿರುವ ಜೋಶಿ ಹಿಂದಿ ಮಾತನಾಡುವ ಪ್ರಾಕ್ಟೀಸ್‌ ಕೂಡ ಮಾಡುತ್ತಿದ್ದಾರಂತೆ. ದಿಲ್ಲಿಯಲ್ಲಿದ್ದು ಪಾರ್ಲಿಮೆಂಟ್‌ ನಡೆಸಬೇಕೆಂದರೆ ಹಿಂದಿ ಕಲಿಯೋದು ಅನಿವಾರ್ಯ.

ಸುವರ್ಣ ನ್ಯೂಸ್ ದಿಲ್ಲಿ ಪ್ರತಿನಿಧಿ ಪ್ರಶಾಂತ್ ನಾತು ಅವರ ಕಾಲಂನಿಂದ