ಬಹುನಿರೀಕ್ಷಿತ ಸಂಸತ್​ ಬಜೆಟ್​ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮೊದಲ ದಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಭಾಷಣ ಮಾಡಲಿದ್ದಾರೆ. ಮೊದಲ ದಿನವೇ ಆರ್ಥಿಕ ಸಮೀಕ್ಷೆ ಮಂಡನೆ ಆಗಲಿದ್ದು, ನಾಳೆ ಅರುಣ್​ ಜೇಟ್ಲಿ ಬಜೆಟ್​ ಮಂಡಿಸಲಿದ್ದಾರೆ.

ನವದೆಹಲಿ(ಜ.31): ಬಹುನಿರೀಕ್ಷಿತ ಸಂಸತ್​ ಬಜೆಟ್​ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮೊದಲ ದಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಭಾಷಣ ಮಾಡಲಿದ್ದಾರೆ. ಮೊದಲ ದಿನವೇ ಆರ್ಥಿಕ ಸಮೀಕ್ಷೆ ಮಂಡನೆ ಆಗಲಿದ್ದು, ನಾಳೆ ಅರುಣ್​ ಜೇಟ್ಲಿ ಬಜೆಟ್​ ಮಂಡಿಸಲಿದ್ದಾರೆ.

ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್​ ಹಾಗೂ ಮುಖ್ಯ ಬಜೆಟ್​​​​​​​​'ನ್ನ ವಿಲೀನಗೊಳಿಸಿ ಮಂಡನೆ ಮಾಡಲಾಗುತ್ತಿದೆ. ಹೀಗಾಗಿ ಈ ಬಾರಿಯ ಬಜೆಟ್​ ಸಾಕಷ್ಟು ಕುತೂಹಲ ಕೆರಳಿಸಿದೆ. ಅಧಿವೇಶನದ ಮೊದಲ ಹಂತ 9 ದಿನಗಳ ಕಾಲ ನಡೆಯಲಿದೆ. ನಂತರ ಮಾರ್ಚ್​ 8ರಿಂದ ಅಧಿವೇಶನದ ದ್ವಿತೀಯ ಹಂತ ಆರಂಭವಾಗಲಿದೆ. ನೋಟ್​​ ಬ್ಯಾನ್​​​​​ ವಿರೋಧಿಸಿ ವಿಪಕ್ಷಗಳು ಕೋಲಾಹಲ ಎಬ್ಬಿಸಿದ್ದ ಕಾರಣ ಚಳಿಗಾಲದ ಅಧಿವೇಶನ ಸಂಪೂರ್ಣ ಹಾಳಾಗಿತ್ತು. ಹೀಗಾಗಿ ಈ ಅಧಿವೇಶನದಲ್ಲಿ ಹಲವು ಮಸೂದೆಗಳು ಮಂಡನೆಗೆ ಸಜ್ಜಾಗಿವೆ. ಮಹತ್ವದ ಜಿಎಸ್​ಟಿ ಮಸೂದೆಗೆ ಸಂಬಮಧಿಸಿದ ಮೂರು ವಿಧೇಯಕರಗಳು ಈ ಬಾರಿ ಪ್ರಮುಖವಾಗಿದೆ..

ಇನ್ನು ಬಜೆಟ್ ಅಧಿವೇಶನ ಸುಗಮವಾಗಿ ಸಾಗಲು ಎಲ್ಲಾ ಪ್ರತಿಪಕ್ಷಗಳ ಸಹಕಾರ ಕೋರಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಅದು ಮಹಾಪಂಚಾಯತ್ ಆಗಿದ್ದು ಭಿನ್ನಾಭಿಪ್ರಾಯಗಳ ನಡುವೆಯೂ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ. ಬಜೆಟ್ ಪೂರ್ವ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಮೋದಿ, ನೋಟುಗಳ ಅಮಾನ್ಯತೆಯಿಂದಾಗಿ ಸಂಸತ್ತಿನ ಚಳಿಗಾಲದ ಅಧಿವೇಶನ ಸಂಪೂರ್ಣ ಗದ್ದಲ, ಪ್ರತಿಭಟನೆಯಲ್ಲಿಯೇ ಕಳೆದುಹೋಯಿತು. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ಫಲಪ್ರದವಾಗಿ ಈ ಬಾರಿಯ ಅಧಿವೇಶನ ಸಾಗಲು ಪ್ರತಿಪಕ್ಷಗಳ ಸಹಕಾರ ಕೋರಿದ್ದಾರೆ.