ಅಪಮೌಲ್ಯೀಕರಣ ಕ್ರಮದ ಬಗ್ಗೆ ರಾಜ್ಯಸಭೆಯಲ್ಲಿ  ಪ್ರತಿಪಕ್ಷಗಳು ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಸಿದ್ದು, ಸರ್ಕಾರದ ಕ್ರಮದ ಬಗ್ಗೆ ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ  ಉತ್ತರಿಸಬೇಕೆಂದು ಪಟ್ಟುಹಿಡಿದಿವೆ.

ನವದೆಹಲಿ (ನ.21): ಕೇಂದ್ರ ಸರ್ಕಾರದ ನೋಟು ಅಪಮೌಲ್ಯೀಕರಣಕ್ರಮವು ಇಂದಿನ ಲೋಕಸಭೆಯ ಕಲಾಪವನ್ನು ಕೂಡಾ ಬಲಿತೆಗೆದುಕೊಂಡಿದೆ.

ನೋಟು ನಿಷೇಧ ಕ್ರಮದಿಂದಾಗಿ 70 ಮಂದಿ ಈವರೆಗೆ ಮೃತಪಟ್ಟಿದ್ದಾರೆ, ಅವರಿಗೂ ಕೂಡಾ ಸದನದಲ್ಲಿ ಸಂತಾಪ ಸೂಚಿಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ಅಪಮೌಲ್ಯೀಕರಣ ಕ್ರಮದ ಬಗ್ಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಸಿದ್ದು, ಸರ್ಕಾರದ ಕ್ರಮದ ಬಗ್ಗೆ ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಉತ್ತರಿಸಬೇಕೆಂದು ಪಟ್ಟುಹಿಡಿದಿವೆ.

ಸರ್ಕಾರದ ಕ್ರಮದ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಬೇಕು. ದೇಶದ ಇತರ ಎಲ್ಲಾ ಕಡೆ ಅವರು ಸುತ್ತುತ್ತಿದ್ದಾರೆ, ಆದರೆ ಸಂಸತ್ತಿಗೆ ಬಂದು ಸ್ಪಷ್ಟನೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಮ್ಯೂನಿಸ್ಟ್ ಪಕ್ಷದ ನಾಯಕ ಸೀತರಾಮ್ ಯೆಚೂರಿ ಹೇಳಿದ್ದಾರೆ.