Asianet Suvarna News Asianet Suvarna News

ಕಲಾಪಗಳನ್ನು ಬಲಿ ಪಡೆದ ನೋಟು ನಿಷೇಧ, ಅಗಸ್ಟಾ ಹಗರಣ

ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಅನಂತ್ ಕುಮಾರ್, ಪ್ರತಿಪಕ್ಷಗಳು ನೊಟು ನಿಷೇಧ ಚರ್ಚೆಯಲ್ಲಿ ಆಸಕ್ತರಾಗಿಲ್ಲವೆಂದೂ, ಅವುಗಳು ಕಪ್ಪುಹಣವನ್ನು ಬಿಳಿಗೊಳಿಸುತ್ತಿವೆಯೆಂದು ಆರೋಪಿಸಿದ್ದಾರೆ.  ಜತೆಗೆ ಅಗಸ್ಟಾ ವೆಸ್ಟ್’ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಬಗ್ಗೆಯೂ ಚರ್ಚೆಯಾಗಬೇಕೆಂದು ಹೇಳಿದ್ದಾರೆ. ಬಳಿಕ ಆಡಳಿತ ಪಕ್ಷ ಹಾಗೂ ವಿಪಕ್ಷ ಸಂಸದರ ನಡುವೆ ಕೊಲಾಹಲ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಕಲಾಪಗಳನ್ನು ಮುಂದೂಡಿದರು.

Parliament Adjourned Over Demonetization

ನವದೆಹಲಿ (ಡಿ.15): ನೋಟು ನಿಷೇಧ ಹಾಗೂ ಅಗಸ್ಟಾ ವೆಸ್ಟ್’ಲ್ಯಾಂಡ್ ಹಗರಣಗಳ ಗದ್ದಲವು ಇಂದಿನ ಸಂಸತ್ತು ಕಲಾಪಗಳನ್ನು ಬಲಿ ಪಡೆದಿದೆ.

ಲೋಕಸಭೆಯ ಕಲಾಪಗಳು ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್ ನಾಯಕ ನೋಟು ನಿಷೇಧದ ಬಗ್ಗೆ ಕೂಡಲೇ ಚರ್ಚೆಯಾಗಬೇಕೆಂದು ಆಗ್ರಹಿಸಿದರು. ಅದಕ್ಕೆ ತೃಣಮೂಲ ಕಾಂಗ್ರೆಸಿನ ನಾಯಕರು ಕೂಡಾ ಧ್ವನಿಗೂಡಿಸಿದರು.

ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಅನಂತ್ ಕುಮಾರ್, ಪ್ರತಿಪಕ್ಷಗಳು ನೊಟು ನಿಷೇಧ ಚರ್ಚೆಯಲ್ಲಿ ಆಸಕ್ತರಾಗಿಲ್ಲವೆಂದೂ, ಅವುಗಳು ಕಪ್ಪುಹಣವನ್ನು ಬಿಳಿಗೊಳಿಸುತ್ತಿವೆಯೆಂದು ಆರೋಪಿಸಿದ್ದಾರೆ.  ಜತೆಗೆ ಅಗಸ್ಟಾ ವೆಸ್ಟ್’ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಬಗ್ಗೆಯೂ ಚರ್ಚೆಯಾಗಬೇಕೆಂದು ಹೇಳಿದ್ದಾರೆ. ಬಳಿಕ ಆಡಳಿತ ಪಕ್ಷ ಹಾಗೂ ವಿಪಕ್ಷ ಸಂಸದರ ನಡುವೆ ಕೊಲಾಹಲ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಕಲಾಪಗಳನ್ನು ಮುಂದೂಡಿದರು.

ಅದೇ ರೀತಿ ರಾಜ್ಯಸಭೆಯಲ್ಲೂ ನೋಟು ನಿಷೇಧ ಕ್ರಮದ ಬಗ್ಗೆ ಉಂಟಾದ ಗದ್ದಲಲದಿಂದ ಕಲಾಪಗಳನ್ನು ನಾಳೆವರೆಗೆ ಮುಂದೂಡಲಾಯಿತು.

Follow Us:
Download App:
  • android
  • ios