ನವದೆಹಲಿ (ಡಿ.05): ಸಂಸತ್ತಿನಲ್ಲಿ ಇಂದು ಕೂಡಾ ನೋಟು ನಿಷೇಧ ಗದ್ದಲ ಮುಂದುವರೆದಿದ್ದು, ಸದನಗಳ ಕಲಾಪಗಳನ್ನು ನಾಳೆಗೆ ಮುಂದೂಡಲಾಗಿದೆ.

ಕಲಾಪಗಳು ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ನೋಟು ನಿಷೇಧ ವಿಚಾರದಲ್ಲಿ ಘೋಷಣೆಗಳನ್ನು ಕೂಗಲಾರಂಭಿಸಿದ್ದಾರೆ.

ಈ ಮಧ್ಯೆ ಸಂಸದೀಯ ವ್ಯವಹಾರಗಳ ಇಲಾಖೆ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಸಮಾಜವಾದಿ ಸಂಸದ ನರೇಶ್ ಅಗರವಾಲ್ ಅವರನ್ನು ಟೀಕಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಲಾಯಮ್ ಸಿಂಗ್ ಯಾದವ್ ತಮ್ಮ ಅಧಿಕಾರಾವಧಿಯಲ್ಲಿ ತೆಗದುಕೊಂಡ ನಿರ್ಧಾರಗಳು ಕೂಡಾ ವಿಫಲವಾಗಿವೆ ಎಂದು ನಖ್ವಿ ಅಣಕಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್, ಸರ್ಕಾರವು ನೋಟು ನಿಷೇಧ ಕ್ರಮದ ವಿಚಾರದಲ್ಲಿ ಚರ್ಚೆಗೆ ಸಿದ್ಧವಿದೆ ಎಂದು ಹೇಳಿದ್ದಾರೆ.