Asianet Suvarna News Asianet Suvarna News

2024ರ ಒಲಿಂಪಿಕ್ಸ್'ಗೆ ಪ್ಯಾರೀಸ್ ಆತಿಥ್ಯ

2020ರ ಒಲಿಂಪಿಕ್ಸ್ ಜಪಾನ್‌ನ ಟೊಕಿಯೊದಲ್ಲಿ ನಡೆದರೆ, 2024ರ ಜಾಗತಿಕ ಕ್ರೀಡಾಕೂಟ ಫ್ರಾನ್ಸ್‌ನ ಪ್ಯಾರೀಸ್‌ನಲ್ಲಿ ಆಯೋಜನೆಗೊಳ್ಳಲಿದೆ.

Paris set for 2024 Olympics as Los Angeles opts for 2028

ಲಾಸ್ ಏಂಜಲೀಸ್(ಆ.02): 2024ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಪ್ಯಾರೀಸ್ ಆತಿಥ್ಯ ವಹಿಸಿದರೆ, 2028ರ ಒಲಿಂಪಿಕ್ಸ್ ಕ್ರೀಡಾಕೂಟ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ.

ಲಾಸ್ ಏಂಜಲೀಸ್ ನಗರದ ಮೇಯರ್ ಈ ವಿಷಯವನ್ನು ಬಹಿರಂಗಗೊಳಿಸಿದ್ದು, ‘ಅಮೆರಿಕ ದೇಶ ಮತ್ತೆ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವ ಸುದ್ದಿಯನ್ನು ಘೋಷಣೆ ಮಾಡುತ್ತಿರುವುದು ಸಂತಸವನ್ನುಂಟು ಮಾಡಿದೆ’ ಎಂದಿದ್ದಾರೆ. 2020ರ ಒಲಿಂಪಿಕ್ಸ್ ಜಪಾನ್‌ನ ಟೊಕಿಯೊದಲ್ಲಿ ನಡೆದರೆ, 2024ರ ಜಾಗತಿಕ ಕ್ರೀಡಾಕೂಟ ಫ್ರಾನ್ಸ್‌ನ ಪ್ಯಾರೀಸ್‌ನಲ್ಲಿ ಆಯೋಜನೆಗೊಳ್ಳಲಿದೆ.

Follow Us:
Download App:
  • android
  • ios