ಯುವಕ ಪರೇಸ್ ಮೇಸ್ತಾ ಹತ್ಯೆ ಪ್ರಕರಣದ ಜ್ವಾಲೆಯಿಂದ ಹೊತ್ತಿ ಉರಿಯುತ್ತಿದೆ ಹೊನ್ನಾವರದ ಕುಮಟಾ. ಪರಿಸ್ಥಿತಿ ಉದ್ರಿಕ್ತಗೊಂಡಿದೆ. ಇಡೀ ಪೊಲೀಸ್​ ಇಲಾಖೆ ತಲ್ಲಣಗೊಂಡಿದೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಆದರೆ ಇದಕ್ಕೆಲ್ಲಾ ಪರಿಹಾರ ಹುಡುಕಬೇಕಾದ ರಾಜಕಾರಣಿಗಳು ಕೆಸರೆರಚಾಟದಲ್ಲೇ ತೊಡಗಿದ್ದಾರೆ. ಈಗ ಪರೇಶ್ ಮೇಸ್ತಾ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಿದ್ದು  ವರದಿ ಪೊಲೀಸ್ ಅಧಿಕಾರಿಗಳ ಕೈ ಸೇರಿದೆ.  

ಕಾರವಾರ (ಡಿ.12): ಯುವಕ ಪರೇಸ್ ಮೇಸ್ತಾ ಹತ್ಯೆ ಪ್ರಕರಣದ ಜ್ವಾಲೆಯಿಂದ ಹೊತ್ತಿ ಉರಿಯುತ್ತಿದೆ ಹೊನ್ನಾವರದ ಕುಮಟಾ. ಪರಿಸ್ಥಿತಿ ಉದ್ರಿಕ್ತಗೊಂಡಿದೆ. ಇಡೀ ಪೊಲೀಸ್​ ಇಲಾಖೆ ತಲ್ಲಣಗೊಂಡಿದೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಆದರೆ ಇದಕ್ಕೆಲ್ಲಾ ಪರಿಹಾರ ಹುಡುಕಬೇಕಾದ ರಾಜಕಾರಣಿಗಳು ಕೆಸರೆರಚಾಟದಲ್ಲೇ ತೊಡಗಿದ್ದಾರೆ. ಈಗ ಪರೇಶ್ ಮೇಸ್ತಾ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಿದ್ದು ವರದಿ ಪೊಲೀಸ್ ಅಧಿಕಾರಿಗಳ ಕೈ ಸೇರಿದೆ.

1: ದೇಹದ ಮೇಲೆ ಆಯುಧ ಬಳಸಿ ಹಲ್ಲೆ ಮಾಡಲಾಗಿದೆಯಾ?

ಉತ್ತರ : ಇಲ್ಲ, ದೇಹದ ಮೇಲೆ ಆಯುಧ ಬಳಸಿ ಗಾಯ ಮಾಡಿರುವ ಬಗ್ಗೆ ಗುರುತುಗಳು ಇಲ್ಲ

 2: ಮುಖ ಬಣ್ಣಗಟ್ಟಿದ್ದು ಹೇಗೆ ?

ಉತ್ತರ: ಶವ ಕೊಳೆತು, ಬಣ್ಣ ಬದಲು

3 - ದೇಹಕ್ಕೆ ಮೊಳೆ ಚುಚ್ಚಿತ್ತಾ?

ಉತ್ತರ: ಮೊಳೆ ಅಥವಾ ಚುಚ್ಚಿದ ಗಾಯ ಇಲ್ಲ

4 - ದೇಹ ಮೇಲೆ ಟ್ಯಾಟೂ ಇತ್ತಾ?

ಉತ್ತರ - ಬಲತೋಳಿನಲ್ಲಿ ಟ್ಯಾಟೂ ಇತ್ತು. ಬಲ ತೋಳಿನಲ್ಲಿ ಶಿವಾಜಿ ಫೋಟೋ, ಹಿಂದಿಯಲ್ಲಿ ಶಿವಾಜಿ ಹೆಸರಿನ ಟ್ಯಾಟೂ

5 - ಟ್ಯಾಟೂ ಅಳಿಸಲಾಗಿದೆಯಾ?

ಉತ್ತರ - ಟ್ಯಾಟೂವನ್ನು ಅಳಿಸಲಾಗಿಲ್ಲ

6 : ಹತ್ಯೆಗೆ ಬಿಸಿ ನೀರು, ಆ್ಯಸಿಡ್ ಬಳಸಿದ್ದಾರಾ?

ಉತ್ತರ - ಇಲ್ಲ

7 - ಬಾಯಿಯಲ್ಲಿ ಏನಾದರೂ ಇತ್ತಾ?

ಉತ್ತರ - ಕಪ್ಪುಬಣ್ಣದ ಪದಾರ್ಥ ಇತ್ತು,
ಬಾಯಿ ಹಾಗೂ ಶ್ವಾಸನಾಳದಲ್ಲಿ ಕಪ್ಪು ಬಣ್ಣದ ಘನ ಪದಾರ್ಥ ಇದ್ದ ಬಗ್ಗೆ ಕುರುಹು

ಹೀಗೆ ಪ್ರಶ್ನೆ ಉತ್ತರಗಳೊಂದಿಗೆ ವಿಧಿವಿಜ್ಞಾನ ತಜ್ಞರು ಪೊಲೀಸರಿಗೆ ಪೋಸ್ಟ್ ಮಾರ್ಟಂ ವರದಿ ನೀಡಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಜಿಪಿ ನಿಂಬಾಳ್ಕರ್ ಮೃತ ಯುವಕ ಪರೇಶ್ ಮೇಸ್ತನ ದೇಹದ ಮೇಲೆ ಯಾವುದೇ ರೀತಿಯ ಗಾಯಗಳಾದ ಉದಾಹರಣೆಗಳು ಇಲ್ಲ. ಮಣಿಪಾಲ ಆಸ್ಪತ್ರೆಯ ವೈದ್ಯರ ತಂಡ ತನ್ನ ವರದಿಯನ್ನು ನೀಡಿದೆ ಅಂದಿದ್ದಾರೆ.

ಸದ್ಯ ಕುಮಟಾ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಶಾಂತಿಯ ಜಿಲ್ಲೆ ಎಂದೆ ಹೆಸರಾಗಿದ್ದ ಉತ್ತರ ಕನ್ನಡ ಈಗ ಕೊತ ಕೊತ ಅಂತಾ ಕುದಿಯುತ್ತಿದ್ದು.. ಸಾರ್ವಜನಿಕರು ಕಂಗಾಲಾಗಿದ್ದಾರೆ.