ಎಲ್‌ಕೆಜಿಗೆ ಪ್ರವೇಶ ಪಡೆದಿದ್ದ ಆರ್‌ಟಿಇ ವಿದ್ಯಾರ್ಥಿಗಳನ್ನು 1ನೇ ತರಗತಿಯಲ್ಲಿ ಪ್ರವೇಶ ಸಂಖ್ಯೆ ಕಡಿಮೆ ಇರುವ ಕಾರಣ ಪ್ರವೇಶ ನೀಡಲಾಗುತ್ತಿಲ್ಲ  

ಬೆಂಗಳೂರು(ಮೇ.10): ಆರ್​ಟಿಇ ಅಡಿ ಅಡ್ಮಿಷನ್ ಮಾಡಿಸಿಕೊಳ್ಳದ ರಾಜರಾಜೇಶ್ವರಿ ನಗರದಲ್ಲಿರುವ ಇಂಧನ ಸಚಿವ ಡಿ.ಕೆ.ಶಿವುಕುಮಾರ್ ಅವರ ಒಡೆತನಕ್ಕೆ ಸೇರಿದ ನ್ಯಾಷನಲ್ ಹಿಲ್ ವಿವ್ಯು ಶಾಲೆ ಎದುರು ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿದರು.

ಶಾಲೆಯಲ್ಲಿ ನೇಮಕ ಮಾಡಿಕೊಳ್ಳಲು ಇಂದು ಕೊನೆಯ ದಿನವಾಗಿದೆ. ಆದರೆ ಆರ್​ಟಿಇ ಅಡಿಯಲ್ಲಿ ಸೀಟು ನೀಡದಂತೆ ಆಡಳಿತ ಮಂಡಳಿ ನಿರ್ದೇಶನ ನೀಡಲಾಗಿದೆ. ಸ್ಥಳೀಯ ಬಿಇಓ ಅಧಿಕಾರಿ ಈ ಬಗ್ಗೆ ತಿಳಿಯಲು ಹೋದರೆ ಶಾಲಾ ಆಡಳಿತ ಮಂಡಳಿ ಒಳಗೆ ಬಿಟ್ಟುಕೊಳ್ಳಲಿಲ್ಲ. ನಂತರ ಶಾಲೆಗೆ ಹೋಗಿ ಮಾಹಿತಿ ಪಡೆದ ಬಿಇಒ ಯಾವುದೇ ಆರ್'ಟಿಇ ಅಡಿಯಲ್ಲಿ ಮಕ್ಕಳನ್ನು ನೇಮಿಸಿಕೊಳ್ಳದಂತೆ ಸಚಿವರೆ ನಿರ್ದೇಶನ ನೀಡಿದ್ದಾರೆ. ಎಲ್‌ಕೆಜಿಗೆ ಪ್ರವೇಶ ಪಡೆದಿದ್ದ ಆರ್‌ಟಿಇ ವಿದ್ಯಾರ್ಥಿಗಳನ್ನು 1ನೇ ತರಗತಿಯಲ್ಲಿ ಪ್ರವೇಶ ಸಂಖ್ಯೆ ಕಡಿಮೆ ಇರುವ ಕಾರಣ ಪ್ರವೇಶ ನೀಡಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.