ತಿವಾರಿ ಕುಟುಂಬವು ರಾಜ್ಯ ಸರಕಾರವನ್ನು ಅತ್ಯಂತ ಭ್ರಷ್ಟ ಎಂದು ಜರೆದಿದೆ. ಆಹಾರ ಇಲಾಖೆಯಲ್ಲಿ ನಡೆದಿದ್ದ ದೊಡ್ಡ ಭ್ರಷ್ಟಾಚಾರವನ್ನು ತಮ್ಮ ಮಗ ಬಯಲಿಗೆಳೆಯಲು ಹೊರಟಿದ್ದ ಎಂದು ಹೇಳಿದ ಬಿಎನ್ ತಿವಾರಿ, ಎಸ್ಐಟಿಯಿಂದ ಸಮರ್ಪಕವಾಗಿ ತನಿಖೆ ನಡೆಯುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಎಸ್ಐಟಿ ತನಿಖೆಯಾಗುತ್ತಿದ್ದರೂ ಯಾರೂ ಕೂಡ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿರುವ ಅನುರಾತ್ ತಿವಾರಿಯವರ ತಂದೆ-ತಾಯಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು(ಜೂನ್ 06): ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಗುವ ಸೂಚನೆ ಇದೆ. ಮೃತ ಅನುರಾಗ್ ತಿವಾರಿ ಅವರ ಕುಟುಂಬದವರು ನಾರಾಯಣ ಪ್ರಭು ಎಂಬುವವರ ಮೇಲೆ ಸಂಶಯದ ಬೆರಳು ತೋರಿಸಿದ್ದಾರೆ. ಯುಪಿ ಕೆಡರ್'ನ ಐಎಎಸ್ ಅಧಿಕಾರಿ ನಾರಾಯಣ ಪ್ರಭು ಮೇಲೆ ತಮಗೆ ಸಂಶಯವಿದೆ ಎಂದು ತಿವಾರಿ ಕುಟುಂಬದವರು ಆರೋಪಿಸಿದ್ದಾರೆ.

ಯಲಹಂಕದಲ್ಲಿ ಸುದ್ದಿಗೋಷ್ಠಿ ನಡೆಸಿದ ಅನುರಾಗ್ ತಿವಾರಿಯವರ ತಂದೆ ಬಿಎನ್ ತಿವಾರಿ ಮತ್ತು ತಾಯಿ ಸುಶೀಲಾ ತಿವಾರಿ, ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ತಮ್ಮ ಮಗನನ್ನು ವಿಷ ಹಾಕಿ ಸಾಯಿಸಲಾಗಿದೆ. ಆ ದಿನ ತಮ್ಮ ಮಗ ಐದು ಜನರ ಜೊತೆ ಊಟಕ್ಕೆ ಹೋಗಿದ್ದ. ಆ 5 ಮಂದಿ ಸೇರಿಯೇ ಕೊಲೆ ಮಾಡಿದ್ದಾರೆ. ನಾರಾಯಣ ಪ್ರಭು ಈ ಕೊಲೆಯ ಹಿಂದಿರುವ ಸಾಧ್ಯತೆ ಇದೆ ಎಂದು ತಿವಾರಿ ಪೋಷಕರು ಶಂಕಿಸಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹ:
ಇದೇ ವೇಳೆ, ತಿವಾರಿ ಕುಟುಂಬವು ರಾಜ್ಯ ಸರಕಾರವನ್ನು ಅತ್ಯಂತ ಭ್ರಷ್ಟ ಎಂದು ಜರೆದಿದೆ. ಆಹಾರ ಇಲಾಖೆಯಲ್ಲಿ ನಡೆದಿದ್ದ ದೊಡ್ಡ ಭ್ರಷ್ಟಾಚಾರವನ್ನು ತಮ್ಮ ಮಗ ಬಯಲಿಗೆಳೆಯಲು ಹೊರಟಿದ್ದ ಎಂದು ಹೇಳಿದ ಬಿಎನ್ ತಿವಾರಿ, ಎಸ್ಐಟಿಯಿಂದ ಸಮರ್ಪಕವಾಗಿ ತನಿಖೆ ನಡೆಯುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಎಸ್ಐಟಿ ತನಿಖೆಯಾಗುತ್ತಿದ್ದರೂ ಯಾರೂ ಕೂಡ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿರುವ ಅನುರಾತ್ ತಿವಾರಿಯವರ ತಂದೆ-ತಾಯಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಯಾರು ಈ ನಾರಾಯಣ್ ಪ್ರಭು?
ಪ್ರಭು ನಾರಾಯಣ್ ಅವರು ಉತ್ತರಪ್ರದೇಶ ರಾಜಧಾನಿ ಲಕ್ನೋ ನಗರ ಅಭಿವೃದ್ಧಿ ಪ್ರಾಧಿಕಾರ ಉಪಾಧ್ಯಕ್ಷರಾಗಿದ್ದಾರೆ. ಅನುರಾಗ್ ತಿವಾರಿ ಸಾವನ್ನಪ್ಪುವ ಮುನ್ನ ಹಜ್ರತ್'ಗಂಜ್'ನಲ್ಲಿ ಉಳಿದುಕೊಂಡಿದ್ದ ಮೀರಾಬಾಯ್ ಗೆಸ್ಟ್'ಹೌಸ್'ನಲ್ಲಿ ಜೊತೆಯಲ್ಲಿದ್ದವರು ಇದೇ ಪ್ರಭು ನಾರಾಯಣ್ ಎನ್ನಲಾಗಿದೆ.