ಸಾಕಷ್ಟುಸೂಚನೆ ಹೊರತಾಗಿಯೂ ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಮೇಲೆ ಕಡಿವಾಣ ಹೇರದ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಸ್ಥಳೀಯ ನ್ಯಾಯಾಲಯವೊಂದು 10 ಪೋಷಕರಿಗೆ 1 ದಿನದ ಜೈಲು ವಾಸದ ಶಿಕ್ಷೆ ವಿಧಿಸಿದೆ.

ಹೈದರಾಬಾದ್‌: ಸಾಕಷ್ಟುಸೂಚನೆ ಹೊರತಾಗಿಯೂ ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಮೇಲೆ ಕಡಿವಾಣ ಹೇರದ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಸ್ಥಳೀಯ ನ್ಯಾಯಾಲಯವೊಂದು 10 ಪೋಷಕರಿಗೆ 1 ದಿನದ ಜೈಲು ವಾಸದ ಶಿಕ್ಷೆ ವಿಧಿಸಿದೆ.

ಜನನಿಭಿಡ ರಸ್ತೆಗಳಲ್ಲಿ ಮಕ್ಕಳ ಬೈಕ್‌ ಮತ್ತು ಕಾರ್‌ ಚಾಲನೆಗೆ ಅವಕಾಶ ನೀಡುತ್ತಿರುವ ಪೋಷಕರ ವಿರುದ್ಧ ಹರಿಹಾಯ್ದಿರುವ ಇಲ್ಲಿನ 9ನೇ ವಿಶೇಷ ಮೆಟ್ರೋಪಾಲಿಟಿನ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನ ನ್ಯಾಯಾಧೀಶ ಕೆ.ಅಲ್ತಾಫ್‌ ಹುಸೇನ್‌, 10 ಪೋಷಕರಿಗೆ ತಲಾ 500 ರು. ದಂಡ ಮತ್ತು 1 ದಿನದ ಜೈಲು ವಾಸದ ಶಿಕ್ಷೆ ಪ್ರಕಟಿಸಿದ್ದಾರೆ. ಜೊತೆಗೆ ಆಟೋ ಓಡಿಸಿದ ಅಪ್ರಾಪ್ತ ಬಾಲಕನೊಬ್ಬನಿಗೆ ಬಾಲಾಪರಾಧಿಗಳ ಕೇಂದ್ರದಲ್ಲಿ 1 ದಿನ ಇರುವ ಶಿಕ್ಷೆಯನ್ನೂ ಗುರುವಾರ ವಿಧಿಸಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ ಹೈದರಾಬಾದ್‌ ಒಂದರಲ್ಲೇ ಅಪ್ರಾಪ್ತರು ವಾಹನ ಓಡಿಸಿದ ಸಂಬಂಧ 1079 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಈ ಪ್ರಕರಣಗಳಲ್ಲಿ 45 ಪೋಷಕರಿಗೆ ದಂಡ ಮತ್ತು ಜೈಲು ಶಿಕ್ಷೆಯನ್ನೂ ನ್ಯಾಯಾಲಯ ವಿಧಿಸಿದೆ.