ಕೆಪಿಸಿಸಿಗೆ ಸಾರಥಿ ಯಾರಾಗುತ್ತಾರೆ ಎನ್ನುವ ಗೊಂದಲಕ್ಕೆ ತೆರೆ ಬಿದ್ದಿದೆ. ಎರಡನೇ ಅವಧಿಗೂ ಪರಮೇಶ್ವರ್ ಮುಂದುವರೆಯುತ್ತಾರೆ. ಇದಕ್ಕೆ ಎಐಸಿಸಿಯಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಅಧ್ಯಕ್ಷ ಸ್ಥಾನದ ರೇಸಿನಲ್ಲಿದ್ದ ಡಿಕೆ ಶಿವಕುಮಾರ್ ಮತ್ತು ಎಸ್ ಆರ್ ಪಾಟೀಲ್ ‘ಗೂ ಸೂಕ್ತ ಸ್ಥಾನ ನೀಡಲಾಗಿದ್ದು, ಈ ಬಗ್ಗೆಯೂ ಎಐಸಿಸಿ ಅಧಿಕೃತವಾಗಿ ಪ್ರಕಟಿಸಬೇಕಿದೆ.

ಬೆಂಗಳೂರು(ಮೇ.31): ಕೆಪಿಸಿಸಿಗೆ ಸಾರಥಿ ಯಾರಾಗುತ್ತಾರೆ ಎನ್ನುವ ಗೊಂದಲಕ್ಕೆ ತೆರೆ ಬಿದ್ದಿದೆ. ಎರಡನೇ ಅವಧಿಗೂ ಪರಮೇಶ್ವರ್ ಮುಂದುವರೆಯುತ್ತಾರೆ. ಇದಕ್ಕೆ ಎಐಸಿಸಿಯಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಅಧ್ಯಕ್ಷ ಸ್ಥಾನದ ರೇಸಿನಲ್ಲಿದ್ದ ಡಿಕೆ ಶಿವಕುಮಾರ್ ಮತ್ತು ಎಸ್ ಆರ್ ಪಾಟೀಲ್ ‘ಗೂ ಸೂಕ್ತ ಸ್ಥಾನ ನೀಡಲಾಗಿದ್ದು, ಈ ಬಗ್ಗೆಯೂ ಎಐಸಿಸಿ ಅಧಿಕೃತವಾಗಿ ಪ್ರಕಟಿಸಬೇಕಿದೆ.

ಕೆಪಿಸಿಸಿಗೆ ಮತ್ತೆ ‘ಪರಮಾ’ಧಿಕಾರ

ಕಳೆದ ಕೆಲ ತಿಂಗಳಿಂದ ಕೆಪಿಸಿಸಿಗೆ ಅಧ್ಯಕ್ಷ ಯಾರಾಗುತ್ತಾರೆ ಎನ್ನುವ ಗೊಂದಲವಿತ್ತು. ಇದೀಗ ಈ ಗೊಂದಲಕ್ಕೆ ತೆರೆ ಬಿದ್ದಿದೆ. ಹಾಲಿ ಅಧ್ಯಕ್ಷ ಪರಮೇಶ್ವರ ಅವರನ್ನೇ ಮುಂದುವರಿಸಲು ಹೈಕಮಾಂಡ್ ನಿರ್ಧರಿಸಿದ್ದು ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಆದ್ರೂ ಇಂಧನ ಸಚಿವ ಡಿ ಕೆ ಶಿವಕುಮಾರ್ ದೆಹಲಿಯಲ್ಲೇ ಬೀಡು ಬಿಟ್ಟು ಕೊನೆ ಗಳಿಗೆಯ ಕಸರತ್ತು ನಡೆಸಿದ್ದಾರೆ.

ಆದರೆ, ಹೈಕಮಾಂಡ್ ನಿನ್ನೆಯೇ ಪರಮೇಶ್ವರ್ ‘ಗೆ ಪಕ್ಷ ಸಂಘಟನೆಯತ್ತ ಗಮನ ನೀಡಿ ಅಂತ ಸೂಚನೆ ನೀಡಿದೆ. ಎಐಸಿಸಿ ಸೂಚನೆ ಮೇರೆಗೆ ಗೃಹ ಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಲು ಪರಂ ಮುಂದಾಗಿದ್ದಾರೆ. ಇವತ್ತು ಬೆಂಗಳೂರಿನ ಪರಮೇಶ್ವರ್ ನಿವಾಸದಲ್ಲಿ ಅವರ ಬೆಂಬಲಿಗರು ಸಹಿ ಹಂಚಿ ಸಂಭ್ರಮಿಸಿದರು. ಬಳಿಕ ಮಾತನಾಡಿದ ಪರಮೇಶ್ವರ್, ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯೋ ಬಗ್ಗೆ ಹೈಕಮಾಂಡ್ ಸೂಚನೆ ನೀಡಿದೆ. ಅಧಿಕೃತ ಘೋಷಣೆಯಾದ ಬಳಿಕ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೆ ಚುನಾವಣೆಯನ್ನ ಗೆಲ್ಲುತ್ತೇವೆ ಎನ್ನುವ ವಿಶ್ವಾಸವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ವ್ಯಕ್ತಪಡಿಸಿದ್ದಾರೆ. ಪರಮೇಶ್ವರ್’ಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ದಲಿತ ವರ್ಗಕ್ಕೆ ಕಾಂಗ್ರೆಸ್ ಗೌರವ ನೀಡಿದೆ. ಇದನ್ನು ಬೇರೆ ಪಕ್ಷಗಳು ಮಾಡಲಾಗುವುದಿಲ್ಲ ಎಂದಿದ್ದಾರೆ.

ಆಕಾಂಕ್ಷಿಗಳಿಗೆ ಹೊಸ ಹೊಣೆ

ಈ ಮಧ್ಯೆ, ಇತರೆ ಆಕಾಂಕ್ಷಿಗಳಾಗಿದ್ದ ಎಸ್ ಆರ್ ಪಾಟೀಲ್ ಮತ್ತು ಡಿ ಕೆ ಶಿವಕುಮಾರ್ ರನ್ನು ಸಮಾಧಾನ ಪಡಿಸುವ ಪ್ರಯತ್ನವನ್ನ ಹೈಕಮಾಂಡ್ ಮಾಡಿದೆ. ಇದೇ ಮೊದಲ ಬಾರಿಗೆ ಎರಡು ಕಾರ್ಯಾಧ್ಯಕ್ಷ ಸ್ಥಾನವನ್ನ ಎಐಸಿಸಿ ಹುಟ್ಟುಹಾಕಿದ್ದು, ಒಂದರಲ್ಲಿ ದಿನೇಶ ಗುಂಡೂರಾವ್ ಮತ್ತೊಂದಕ್ಕೆ ಎಸ್ ಆರ್ ಪಾಟೀಲ್ ಅವರನ್ನು ನೇಮಿಸುವ ಸಾಧ್ಯತೆ ಇದೆ. ಇದೇ ವೇಳೆ, ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಡಿಕೆ ಶಿವಕುಮಾರರನ್ನು ಆಯ್ಕೆ ಮಾಡಿದ್ದು, ಸತೀಶ ಜಾರಕಿಹೊಳಿಗೆ ಎಐಸಿಸಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ ಎನ್ನಲಾಗಿದ್ದು ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಆಗಬೇಕಲಿದೆ. ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಗುದ್ದಾಟಕ್ಕೆ ತೆರೆ ಬೀಳಲಿದ್ದು ಅಸೆಂಬ್ಲಿ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ..