ಚುನಾವಣೆ ಸಮೀಪವಿರುವ ಈ ಹಂತದಲ್ಲಿ ನನ್ನನ್ನು ಕೆಪಿಸಿಸಿ ಹುದ್ದೆಯಿಂದ ಬದಲಿಸಬೇಡಿ. ನನ್ನನ್ನು ನಂಬಿ ಹೊಣೆ ನೀಡಿದರೆ ಸಾಮೂಹಿಕ ನಾಯಕತ್ವದಡಿ ಪಕ್ಷ ಅಧಿಕಾರಕ್ಕೆ ತರಲು ಎಲ್ಲಾ ಶ್ರಮಪಡುವೆ. ಒಂದು ವೇಳೆ ನನ್ನ ಬದಲಿಸುವುದೇ ಆದರೆ ಈ ಹುದ್ದೆಯನ್ನು ದಲಿತರ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿ. ಹೀಗಂತ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಬಳಿ ವಾದ ಮಂಡಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ
ನವದೆಹಲಿ(ಮೇ.13): ಚುನಾವಣೆ ಸಮೀಪವಿರುವ ಈ ಹಂತದಲ್ಲಿ ನನ್ನನ್ನು ಕೆಪಿಸಿಸಿ ಹುದ್ದೆಯಿಂದ ಬದಲಿಸಬೇಡಿ. ನನ್ನನ್ನು ನಂಬಿ ಹೊಣೆ ನೀಡಿದರೆ ಸಾಮೂಹಿಕ ನಾಯಕತ್ವದಡಿ ಪಕ್ಷ ಅಧಿಕಾರಕ್ಕೆ ತರಲು ಎಲ್ಲಾ ಶ್ರಮಪಡುವೆ. ಒಂದು ವೇಳೆ ನನ್ನ ಬದಲಿಸುವುದೇ ಆದರೆ ಈ ಹುದ್ದೆಯನ್ನು ದಲಿತರ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿ. ಹೀಗಂತ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಳಿ ವಾದ ಮಂಡಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ
ಹೈಕಮಾಂಡ್ ಬುಲಾವ್ ಮೇರೆಗೆ ಹಠಾತ್ ದೆಹಲಿಗೆ ತೆರಳಿದ್ದ ಪರಮೇಶ್ವರ್ ಅವರು ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಈ ವಾದ ಮಂಡಿಸಿದರು. ಪರಮೇಶ್ವರ್ ದೆಹಲಿ ಭೇಟಿ ಬೆನ್ನಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್ ಅವರನ್ನು ಸಹ ಹೈಕಮಾಂಡ್ ಕರೆಸಿಕೊಂಡಿದ್ದು, ಅವರೊಂದಿಗೆ ಬಹುತೇಕ ಶನಿವಾರ ಮಾತುಕತೆ ನಡೆಸಲಿದೆ.
ಪರಂ-ರಾಹುಲ್ ಭೇಟಿ: ದೆಹಲಿಯಲ್ಲಿ ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಪರಮೇಶ್ವರ್ ಅವರು ತಮ್ಮನ್ನು ಏಕೆ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸಬೇಕು ಎಂದು ವಾದಿಸಿದ್ದಾರೆ ಎನ್ನಲಾಗಿದೆ. ಕಳೆದ ಆರೂವರೆ ವರ್ಷಗಳಲ್ಲಿ ತಮ್ಮ ಕೊಡುಗೆ ಹಾಗೂ ರಾಜ್ಯಾದ್ಯಂತ ಹೊಂದಿರುವ ಜಾಲವನ್ನು ವಿವರಿಸಿದ್ದು, ಈ ಹಂತದಲ್ಲಿ ಬದಲಾವಣೆ ಮಾಡುವುದಕ್ಕಿಂತ ತಮ್ಮನ್ನು ಮುಂದುವರೆಸುವುದು ಪಕ್ಷದ ಹಿತಕ್ಕೂ ಒಳ್ಳೆಯದು ಎಂದು ವಾದ ಮಂಡಿಸಿದರು ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಶೇ.24ರಷ್ಟುದಲಿತ ಮತದಾರರಿದ್ದು, 50ಕ್ಕೂ ಹೆಚ್ಚು ಮೀಸಲು ಕ್ಷೇತ್ರಗಳಿವೆ. ಈ ಹಂತದಲ್ಲಿ ತಮ್ಮನ್ನು ಬದಲಾವಣೆ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ. ಒಂದು ವೇಳೆ ತಮ್ಮನ್ನು ಬದಲಾಯಿಸು ವುದೇ ಆದರೆ ಈ ಹುದ್ದೆಗೆ ಮತ್ತೊಬ್ಬ ದಲಿತರನ್ನೇ ತರಬೇಕು ಹಾಗೂ ಖರ್ಗೆ ಅವರನ್ನೇ ತರಬೇಕು ಎಂದು ವಾದಿಸಿದರು ಎಂದು ಮೂಲಗಳು ಹೇಳಿವೆ.
