ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಮುಂದಿನ ಚುನಾವಣೆಯಲ್ಲಿ ಕಟ್ಟಕಡೆಯ ಬಾರಿಗೆ ಸ್ಪರ್ಧಿಸಲಿದ್ದು, ಅನಂತರ ಅವರು ಚುನಾವಣಾ ರಾಜಕೀಯದಿಂದ ದೂರವುಳಿಯುವ ಚಿಂತನೆ ಹೊಂದಿದ್ದಾರೆ ಎಂದು ಎನ್ನಲಾಗುತ್ತಿದೆ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಮುಂದಿನ ಚುನಾವಣೆಯಲ್ಲಿ ಕಟ್ಟಕಡೆಯ ಬಾರಿಗೆ ಸ್ಪರ್ಧಿಸಲಿದ್ದು, ಅನಂತರ ಅವರು ಚುನಾವಣಾ ರಾಜಕೀಯದಿಂದ ದೂರವುಳಿಯುವ ಚಿಂತನೆ ಹೊಂದಿದ್ದಾರೆ ಎಂದು ಎನ್ನಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂತಹ ಯಾವ ಉದ್ದೇಶ ನನಗಿಲ್ಲ. ಯಾರೋ ಇಂತಹ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ, ನಾನು ಇಂತಹ ಯಾವುದೇ ಚಿಂತನೆ ಹೊಂದಿಲ್ಲ. ಇದ್ದಿದ್ದರೆ ನಾನೇ ಹೇಳುತ್ತಿದ್ದೆ.

ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಆದರೆ, ಖುದ್ದು ಪರಮೇಶ್ವರ್ ಅವರು ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಪರಮೇಶ್ವರ್ ಅವರು ತಮ್ಮ ಆಪ್ತರ ಬಳಿ ಇಂತಹ ಇಂಗಿತ ವ್ಯಕ್ತಪಡಿಸಿದ್ದು, ಮುಂದಿನ ಚುನಾವಣೆಯ ನಂತರ ತಮ್ಮ ವೈದ್ಯಕೀಯ ಕಾಲೇಜಿನ ವ್ಯವಹಾರಗಳಲ್ಲಿ ವ್ಯಸ್ತರಾಗುವುದಾಗಿ ಆಪ್ತರ ಮುಂದೆ ಹೇಳಿದ್ದಾರೆ (ಈ ಆಪ್ತರು ಯಾರು ಎಂಬುದು ಗೊತ್ತಿಲ್ಲ!) ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗಿತ್ತು.

ಆದರೆ, ಇದನ್ನು ‘ಕನ್ನಡಪ್ರಭಕ್ಕೆ’ ಸ್ಪಷ್ಟವಾಗಿ ನಿರಾಕರಿಸಿರುವ ಪರಮೇಶ್ವರ್ ಅವರು, ‘ಅಂತಹ ಉದ್ದೇಶವಿದ್ದಿದ್ದರೆ ನಾನೇ ಮಾಧ್ಯಮಗಳ ಮುಂದೆ ಸ್ಪಷ್ಟವಾಗಿ ಹೇಳುತ್ತಿದ್ದೆ. ಅದೆಲ್ಲ ಸುಳ್ಳು. ಇಂತಹ ಯಾವ ಉದ್ದೇಶ ನನಗಿಲ್ಲ. ಯಾರೋ ಇಂತಹ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ, ತಾವು ಇಂತಹ ಯಾವುದೇ ಚಿಂತನೆ ಹೊಂದಿಲ್ಲ’ ಎಂದು ಹೇಳಿದರು.